ಹರಿಹರ, ಆ.19- ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರಾಮಕೃಷ್ಣ ಆಶ್ರಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಗಿರಿಯಮ್ಮ ಪದವಿ ಪೂರ್ವ ಕಾಲೇಜಿನ 20 ವಿದ್ಯಾರ್ಥಿಗಳಿಗೆ ಆಶ್ರಮದ ಪುಸ್ತಕಗಳನ್ನು ಹಾಗೂ ನೋಟ್ ಪುಸ್ತಕ, ಪೆನ್ಗಳನ್ನು ನೀಡಿ ಗೌರವಿಸಲಾಯಿತು.
ಇಬ್ಬರು ವಿದ್ಯಾರ್ಥಿನಿಯರಿಗೆ ವಿಶೇಷ ಬಹುಮಾನಗಳನ್ನು ನೀಡಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ (ಕನ್ನಡ ಮಾಧ್ಯಮದಲ್ಲಿ) ಪ್ರಥಮ ಸ್ಥಾನ ಪಡೆದ ಅಭಿಷೇಕ್ ಹಾಗೂ ಅವರ ತಂದೆ ಮಂಜುನಾಥ್, ತಾಯಿ ನೇತ್ರಾವತಿ ಅವರನ್ನು ಗೌರವಿಸಲಾಯಿತು. ಮುಂದಿನ ವಿದ್ಯಾಭ್ಯಾಸಕ್ಕೆ ಧನ ಸಹಾಯ ಮಾಡುವ ಭರವಸೆಯನ್ನು ನೀಡಲಾಯಿತು.
ಕಳೆದ 3 ವರ್ಷಗಳಿಂದ ಆಶ್ರಮದಲ್ಲಿಯೇ ಸ್ವಯಂ ಸೇವಕನಾಗಿದ್ದುಕೊಂಡು ಸೇವೆ ಮಾಡುತ್ತಾ ಎಸ್ಸೆಸ್ಸೆಲ್ಸಿಯಲ್ಲಿ ಒಟ್ಟು 563 ಅಂಕಗಳನ್ನು ಪಡೆದಿರುವ ಗಗನ ಎಂ. ಕಾಕೋಳ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸ್ವಾಮಿ ಶಾರದೇಶಾನಂದ ಸ್ವಾಮಿಗಳು ಉಪಸ್ಥಿತರಿದ್ದರು.