ತಮ್ಮ ಮನೆಯ ಗಣಪತಿಯನ್ನು ತಾವೇ ಸಿದ್ಧಪಡಿಸುತ್ತಿರುವ ಮಕ್ಕಳು

ಹೊನ್ನಾಳಿ, ಆ.19- ಪಟ್ಟಣದ ದೊಡ್ಡಪೇಟೆಯ ಅನುಷಾ ಪಾಟೀಲ್ ಹಾಗೂ ಚಿನ್ಮಯ್ ಪಾಟೀಲ್ ಎಂಬ ಇಬ್ಬರು ಮಕ್ಕಳು ತಮ್ಮ ತಮ್ಮ ಮನೆಗೆ ಪೂಜೆಗೆಂದು ತರುವ ಗಣಪತಿಯನ್ನು ತಾವೇ ಸಿದ್ದಪಡಿಸುತ್ತಿರುವುದು. 

ರಜಾ ದಿನದ ಸದುಪಯೋಗಕ್ಕೆ ಮುಂದಾಗಿರುವ ಈ ಮಕ್ಕಳು ವಿದ್ಯೆ ಕೊಡುವ ಗಣಪತಿ ಮೂರ್ತಿಯನ್ನು  ತಾವೇ ಸಿದ್ದಪಡಿಸುವ  ಮೂಲಕ ವಿದ್ಯೆಯಿಂದ ತಮ್ಮನ್ನು  ವಂಚಿತರಾಗದಂತೆ ಕಾಪಾಡು ಗಣಪ ಎಂಬುದಾಗಿ ಈ ಪ್ರಯತ್ನ ನಡೆಸಲು ಮುಂದಾಗಿರುವುದಾಗಿ ತಮ್ಮ ಅಭಿಪ್ರಾಯ  ಹಂಚಿ ಕೊಂಡಿದ್ದು ಸಿದ್ದಗೊಳ್ಳುತ್ತಿರುವ ಗಣಪತಿಯನ್ನು ಪುಟಾಣಿಗಳು ವೀಕ್ಷಿಸುತ್ತಿರುವರು.

error: Content is protected !!