ದಾವಣಗೆರೆ, ಆ. 19 – ಜಿಲ್ಲೆಯಲ್ಲಿ ಬುಧವಾರ 228 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 6 ಸಾವಿರದ ಗಡಿ ದಾಟಿದೆ.
ಇದೇ ದಿನದಂದು 7 ಜನರು ಕೊರೊನಾದಿಂದ ಮೃತಪಟ್ಟಿದ್ದರೆ, 66 ಜನ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 2,014 ಆಗಿದೆ.
ಜಿಲ್ಲೆಯಲ್ಲಿ ಇದುವರೆಗೂ 6,011 ಸೋಂಕಿತರು ಕಂಡು ಬಂದಿದ್ದಾರೆ. ಇವರಲ್ಲಿ 3,861 ಜನರು ಗುಣಮುಖರಾಗಿದ್ದಾರೆ. 136 ಜನರು ಸಾವನ್ನಪ್ಪಿದ್ದಾರೆ.
ಬುಧವಾರದಂದು ದಾವಣಗೆರೆ ತಾಲ್ಲೂಕಿನಲ್ಲಿ 115 ಸೋಂಕಿತರು ಪತ್ತೆಯಾಗಿದ್ದಾರೆ. ಹರಿಹರದಲ್ಲಿ 12, ಜಗಳೂರಿನಲ್ಲಿ 9, ಚನ್ನಗಿರಿಯಲ್ಲಿ 49, ಹೊನ್ನಾಳಿಯಲ್ಲಿ 37 ಹಾಗೂ ಹೊರ ಜಿಲ್ಲೆಯ 6 ಸೋಂಕಿತರು ಪತ್ತೆಯಾಗಿದ್ದಾರೆ.
ಇದೇ ದಿನ ದಾವಣಗೆರೆ ತಾಲ್ಲೂಕಿನ 57 ಸೋಂಕಿತರು ಗುಣಮುಖರಾಗಿದ್ದಾರೆ. ಹರಿಹರದ 5, ಜಗಳೂರು ಹಾಗೂ ಚನ್ನಗಿರಿಯ ತಲಾ ಇಬ್ಬರು ಗುಣಮುಖರಾಗಿದ್ದಾರೆ.
ದಾವಣಗೆರೆಯ ಸಿದ್ದವೀರಪ್ಪ ಬಡಾವಣೆಯ 64ರ ಪುರುಷ, ನಿಟುವಳ್ಳಿಯ 42ರ ಪುರುಷ, ಆವರಗೆರೆಯ 58ರ ಪುರುಷ, ಕೆ.ಬಿ. ಬಡಾವಣೆಯ 64ರ ಪುರುಷ, ಪಿ.ಬಿ. ರಸ್ತೆಯ 56ರ ಪುರುಷ, ಜಗಳೂರಿನ ಕಮಂಡಲಗೊಂದಿಯ 60ರ ಮಹಿಳೆ ಹಾಗೂ
ಹಾವೇರಿ ಜಿಲ್ಲೆ ರಾಣೇಬೆನ್ನೂರಿನ 89ರ ವೃದ್ಧ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಾವಣಗೆರೆಯ ನಿಜಲಿಂಗಪ್ಪ ಬಡಾವಣೆಯ 78 ವರ್ಷದ ವೃದ್ಧ, ಶಿವಕುಮಾರಸ್ವಾಮಿ ಬಡಾವಣೆಯ 19ರ ಯುವತಿ, 46ರ ಮಹಿಳೆ, ದೇವರಾಜ ಅರಸ್ ಬಡಾವಣೆಯ 23ರ ಪುರುಷ, ಮೌನೇಶ್ವರ ಬಡಾವಣೆಯ 58ರ ಪುರುಷ, ಎಂ.ಸಿ.ಸಿ. ಎ ಬ್ಲಾಕ್‌ನ 65ರ ಮಹಿಳೆ, ಬಸವೇಶ್ವರ ನಗರದ 56ರ ಮಹಿಳೆಯಲ್ಲಿ ಸೋಂಕು ಕಂಡು ಬಂದಿದೆ.
ಕೊಂಡಜ್ಜಿ ರಸ್ತೆಯ ವಿನಾಯಕ ನಗರದ 56ರ ಮಹಿಳೆ, ವಿದ್ಯಾನಗರದ 67ರ ಪುರುಷ ಎಂ.ಸಿ.ಸಿ. ಬಿ ಬ್ಲಾಕ್‌ನ 62ರ ಪುರುಷ, ಕೆ.ಬಿ. ಬಡಾವಣೆಯ 57ರ ಪುರುಷ, ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರುವ 34ರ ಪುರುಷ, ವಿಜಯ ನಗರದ 67ರ ಪುರುಷನಲ್ಲಿ ಸೋಂಕು ಕಂಡು ಬಂದಿದೆ.
ನಿಟುವಳ್ಳಿಯ 42, 58 ಹಾಗೂ 65ರ ಪುರುಷರು ಹಾಗೂ 24ರ ಮಹಿಳೆ, ಎಸ್.ಪಿ.ಎಸ್. ನಗರದ 59ರ ಪುರುಷ, ವಿನೋಬನಗರದ 39 ಹಾಗೂ 53ರ ಪುರುಷರು, ವಿಜಯ ನಗರ ಬಡಾವಣೆಯ 51ರ ಮಹಿಳೆ, ರಾಂ ಅಂಡ್ ಕೋ ಸರ್ಕಲ್ ಬಳಿಯ 43ರ ಪುರುಷ, ತರಳಳಬಾಳು ಬಡಾವಣೆಯ 33ರ ಮಹಿಳೆ, ಎಂ.ಸಿ.ಸಿ. ಬಿ ಬ್ಲಾಕ್‌ನ 34ರ ಮಹಿಳೆ, ಆಜಾದ್ ನಗರದ 23ರ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಒಂದೇ ದಿನ 7 ಸಾವು, 228 ಸೋಂಕು, 66 ಗುಣಮುಖ
ಹರಿಹರ ತಾಲ್ಲೂಕಿನಲ್ಲಿ 31 ಸೋಂಕು ದೃಢ
ಹರಿಹರ : ನಗರದಲ್ಲಿ ಮೊಚಿ ಕಾಲೋನಿ, ಪೊಲೀಸ್ ಕ್ವಾಟರ್ಸ್, ಗುತ್ತೂರು, ವಿದ್ಯಾನಗರ ಸಿ ಬ್ಲಾಕ್ ಬಡಾವಣೆ ಸೇರಿ 12 ವ್ಯಕ್ತಿಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಮಲಪುರ 4, ಶಂಶಿಪುರ 1, ಗಂಗನರಹರಸಿ 2, ಬೇವಿನಹಳ್ಳಿ 1, ನಿಟ್ಟೂರು 7, ಬಿಳಸನೂರು 3, ವಾಸನ 1 ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟು 31 ವ್ಯಕ್ತಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ತಿಳಿಸಿದರು. ನಗರದಲ್ಲಿ ಇದುವರೆಗೆ 558 ಗ್ರಾಮೀಣ ಪ್ರದೇಶಗಳಲ್ಲಿ 359 ಸೇರಿ ಒಟ್ಟು 917 ವ್ಯಕ್ತಿಗಳು ಇದ್ದು ಹೋಂ ಐಸೋಲೇಷನ್ ನಲ್ಲಿ 256, ದಾವಣಗೆರೆ ಸಿ.ಜೆ. ಆಸ್ಪತ್ರೆಯಲ್ಲಿ 142, ಕೊವಿಡ್ ಕೇರ್ ಸೆಂಟರ್ ನಲ್ಲಿ 176, ಹರಿಹರ ಸಾರ್ವಜನಿಕ ಆಸ್ಪತ್ರೆಯಲ್ಲಿ 271 ವ್ಯಕ್ತಿಗಳು ಚಿಕಿತ್ಸೆ ಪಡೆಯುತ್ತಿದ್ದು ಉಳಿದ 331 ವ್ಯಕ್ತಿಗಳು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ. ನಗರದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸೇರಿದಂತೆ 298 ಕಂಟೋನ್ಮೆಂಟ್ ಝೋನ್ ಗಳು ಇದ್ದು ಅದರಲ್ಲಿ 111 ಅವಧಿ ಮುಗಿದಿದ್ದು 167 ಕಂಟೋನ್ಮೆಂಟ್ ಝೋನ್ಗಳಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೌರಾಯುಕ್ತೆ ಎಸ್ ಲಕ್ಷ್ಮೀ ಜಿಲ್ಲಾ ಮಲೇರಿಯಾ ಅಧಿಕಾರಿ ನಟರಾಜ್, ಆರೋಗ್ಯ ಇಲಾಖೆಯ ಡಾ. ಚಂದ್ರಮೋಹನ್, ವಿಮಲನಾಯ್ಕ್ ಇತರರು ಹಾಜರಿದ್ದರು.
ಹರಳಹಳ್ಳಿಯಲ್ಲಿ 23 ಜನರಿಗೆ ಟೆಸ್ಟ್, ಬಿಳಸನೂರಿನಲ್ಲಿ ಮೂವರಿಗೆ ಸೋಂಕು
ಮಲೇಬೆನ್ನೂರು, ಆ.19- ಹರಳಹಳ್ಳಿ ಗ್ರಾಮದಲ್ಲಿ ಬುಧವಾರ 23 ಜನರಿಗೆ ಕೊರೊನಾ ರಾಪಿಡ್ ಟೆಸ್ಟ್ ಮಾಡಲಾಗಿದೆ ಎಂದು ಉಪತಹಶೀಲ್ದಾರ್ ಆರ್.ರವಿ ತಿಳಿಸಿದ್ದಾರೆ.
ಬಿಳಸನೂರು ಗ್ರಾಮದಲ್ಲಿ 75 ವರ್ಷದ ವೃದ್ಧನಿಗೆ ಮತ್ತು 70 ವರ್ಷದ ವೃದ್ದೆಗೆ ಹಾಗೂ 45 ವರ್ಷದ ಮಹಿಳೆಗೆ ಸೋಂಕು ತಗುಲಿದೆ.
ಗುರುವಾರ ಬಹಳಷ್ಟು ಕೊರೊನಾ ಪರೀಕ್ಷಾ ವರದಿಗಳು ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ, ಟಿಹೆಚ್ಓ ಡಾ. ಚಂದ್ರ ಮೋಹನ್, ವೈದ್ಯಾಧಿಕಾರಿ ಡಾ.ಲಕ್ಷ್ಮಿದೇವಿ ಅವರು ಭೇಟಿ ನೀಡಿ, ಹೋಂ ಕ್ವಾರಂಟೈನ್‌ನಲ್ಲಿರುವ ಕೊರೊನಾ ಸೋಂಕಿತರ ಆರೋಗ್ಯ ವಿಚಾರಿಸಿದರು.
ಪಿ.ಜೆ. ಬಡಾವಣೆಯ 40ರ ಪುರುಷ ದೇವರಾಜ ಅರಸ್ ಬಡಾವಣೆಯ 76ರ ವೃದ್ಧ, ವಿನೋಬನಗರದ 24ರ ಮಹಿಳೆ, ಶಿವಕುಮಾರ ಸ್ವಾಮಿ ಬಡಾವಣೆಯ 49ರ ಪುರುಷ, ರಂಗನಾಥ ಬಡಾವಣೆಯ 65ರ ಪುರುಷ, ಎಂ.ಸಿ.ಸಿ. ಎ ಬ್ಲಾಕ್‌ನ 59ರ ಪುರುಷ, ತರಳಬಾಳು ಬಡಾವಣೆಯ 56ರ ಪುರುಷ, ಹೆಚ್.ಕೆ.ಆರ್. ನಗರದ 40ರ ಪುರು, ಹೊಂಡದ ರಸ್ತೆಯ 65ರ ಪುರುಷ, ಜಯನಗರದ 17ರ ಯುವತಿ, 45ರ ಮಹಿಳೆ, ಕರಿಯಮ್ಮ ಲೇಔಟ್‌ನ 14ರ ಯುವತಿ, ರಾಜೇಶ್ವರಿ ಬಡಾವಣೆಯ 37ರ ಮಹಿಳೆ, ಕಾಯಿಪೇಟೆಯ 56ರ ಪುರುಷ, ಡಿಸಿಎಂ ಬಡಾವಣೆಯ 32ರ ಪುರುಷ ಹಾಗೂ 20ರ ಯುವಕ, ಇಮಾಮ್ ನಗರದ 23ರ ಪುರುಷ, ಶಿವಕುಮಾರ ಸ್ವಾಮಿ ಬಡಾವಮೆಯ 56ರ ಮಹಿಳೆ, ಕುಕ್ಕವಾಡದ 35ರ ಪುರುಷ, 40 ಹಾಗೂ 26ರ ಮಹಿಳೆಯರು ಹಾಗೂ 2 ವರ್ಷದ ಗಂಡು ಮಗು, ಒಕ್ಕಲಿಗ ಪೇಟೆಯ 22ರ ಮಹಿಳೆ, ಎಸ್.ಎನ್. ಬಡಾವಣೆಯ 28ರ ಮಹಿಳೆ, ಆಜಾದ್ ನಗರ ಪೊಲೀಸ್ ಠಾಣೆಯ 29ರ ಮಹಿಳೆಯರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಆಂಜನೇಯ ಬಡಾವಣೆಯ 56ರ ಪುರುಷ, ರಂಗನಾಥ ನಗರದ 51ರ ಪುರುಷ, ಖಾಸಗಿ ಆಸ್ಪತ್ರೆಯ ಪಿ.ಜಿ.ಯಲ್ಲಿರುವ 27ರ ಮಹಿಳೆ ಹಾಗೂ 22ರ ಪುರುಷ, ಆಂಜನೇಯ ಬಡಾವಣೆಯ 45ರ ಮಹಿಳೆ, ಶ್ರೀರಾಮ ಬಡಾವಣೆಯ 50ರ ಪುರುಷ ಹಾಗೂ 45ರ ಮಹಿಳೆ, ನಿಟುವಳ್ಳಿಯ 37ರ ಪುರುಷ, ಶಿವಾಜಿ ನಗರದ 41ರ ಪುರುಷ, ಒಕ್ಕಲಿಗರ ಪೇಟೆಯ 45ರ ಮಹಿಳೆ, ಶ್ರೀರಾಮ ನಗರದ 22ರ ಮಹಿಳೆ, ಶ್ರೀರಾಮ ನಗರದ 46 ಹಾಗೂ 61ರ ಪುರುಷರು, 30ರ ಮಹಿಳೆ ಹಾಗೂ 16ರ ಯುವಕ, ಪಿ.ಜೆ. ಬಡಾವಣೆಯ 78ರ ವೃದ್ಧೆ, ತರಳಬಾಳು ಬಡಾವಣೆಯ 45ರ ಮಹಿಳೆ, ನಿಟುವಳ್ಳಿಯ 57ರ ಪುರುಷ, ರಾಜೇಂದ್ರ ಬಡಾವಣೆಯ 42ರ ಮಹಿಳೆ, ಪಿ.ಜೆ. ಬಡಾವಣೆಯ 63ರ ಮಹಿಳೆ, ವಿದ್ಯಾನಗರದ 52ಹಾಗೂ 68ರ ಪುರುಷರು, ಗಡಿಯಾರ ಕಂಬದ 31ರ ಮಹಿಳೆ, ಖಾಸಗಿ ಆಸ್ಪತ್ರೆಯ 37ರ ಮಹಿಳೆ, ಬೆಳ್ಳೂಡಿ ಗಲ್ಲಿಯ 49ರ ಮಹಿಳೆ, ಕೆ.ಟಿ.ಜೆ. ನಗರದ 56ರ ಮಹಿಳೆ, ರಂಗನಾಥ ಬಡಾವಣೆಯ 91ರ ವೃದ್ಧ ಹಾಗೂ 82ರ ವೃದ್ಧೆ, ಎಸ್.ಕೆ.ಎಸ್. ನಗರದ 30ರ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ.
ತಾಲ್ಲೂಕಿನ ತುರ್ಚಘಟ್ಟದ 60ರ ಮಹಿಳೆ, ಶ್ಯಾಗಲೆಯ 44ರ ಮಹಿಳೆ, ದೊಡ್ಡಬಾತಿಯ 14ರ ಯುವಕ, 67ರ ಮಹಿಳೆ, 43ರ ಪುರುಷ ಹಾಗೂ 77ರ ವೃದ್ಧ, ಎಲೇಬೇತೂರಿನ 36ರ ಪುರುಷ, ಹುಲ್ಕಟ್ಟೆಯ 27ರ ಮಹಿಳೆಯರಲ್ಲಿ ಸೋಂಕು ಕಂಡು ಬಂದಿದೆ.
ಯಂಕನಹಳ್ಳಿ ಕ್ಯಾಂಪ್‌ನ 43ರ ಪುರುಷ, ನರಗನಹಳ್ಳಿಯ 2 ವರ್ಷದ ಬಾಲಕಿ, ಎಂ.ಬಿ. ಕೆರೆಯ 47ರ ಪುರುಷ, ಹಳೇಬಾತಿಯ 48ರ ಮಹಿಳೆ, ಆನಗೋಡಿನ 52ರ ಪುರುಷ, ಹೊನ್ನೂರು ಗೊಲ್ಲರಹಟ್ಟಿಯ 75ರ ವೃದ್ಧೆ, ಕನಗೊಂಡನಹಳ್ಳಿಯ 13ರ ಬಾಲಕಿ, ಶಿರಮಗೊಂಡನಹಳ್ಳಿಯ 28ರ ಪುರುಷ ಹಾಗೂ 21ರ ಮಹಿಳೆ, ಪಾಲವ್ವನಹಳ್ಳಿಯ 48ರ ಪುರುಷ, ಎಲೆಬೇತೂರಿನ 35ರ ಮಹಿಳೆ ಹಾಗೂ 65ರ ಪುರುಷ, ಕೋಡಿಹಳ್ಳಿಯ 70ರ ವೃದ್ಧೆ ಹಾಗೂ 40 ಮತ್ತು 42ರ ಮಹಿಳೆಯರು, ಎಲೇಬೇತೂರಿನ 58ರ ಮಹಿಳೆ ಸೋಂಕು ಪತ್ತೆಯಾಗಿದೆ.