ಹೊನ್ನಾಳಿ ತಾ|| ಮಲೇಕುಂಬಳೂರು ಗ್ರಾಮದ ವಾಸಿ ಹಾಗೂ ತಾ|| ಕುರುಬ ಸಮಾಜದ ಅಧ್ಯಕ್ಷರೂ, ಪಿಎಸಿಎಸ್ ನಿವೃತ್ತ ಸಿಇಓ ಮತ್ತು ಸಂಘದ ಮಾಜಿ ಅಧ್ಯಕ್ಷರೂ, ಗ್ರಾ.ಪಂ. ಮಾಜಿ ಅಧ್ಯಕ್ಷರೂ ಆದ ಕೆ. ಹಾಲಪ್ಪ (71) ಅವರು ದಿನಾಂಕ 18.08.2020ರ ಮಂಗಳವಾರ ಸಾಯಂಕಾಲ 4.30 ಕ್ಕೆ ನಿಧನರಾದರು. ಪತ್ನಿ, ಓರ್ವ ಪುತ್ರಿ, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 19.8.2020ರ ಬುಧವಾರ ಮಧ್ಯಾಹ್ನ 1 ಕ್ಕೆ ಮಲೇಕುಂಬಳೂರು ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 24, 2024