ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

ಹರಪನಹಳ್ಳಿ, ಆ.18- ರೈತರಿಗೆ, ಕೃಷಿ ಕಾರ್ಮಿಕರಿಗೆ ಸೂಕ್ತ ಬೆಳೆ ಪರಿಹಾರ ನೀಡುವಂತೆ  ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಹಿತ ರಕ್ಷಣಾ ವೇದಿಕೆ ತಾಲೂಕು ಘಟಕದ ಕಾರ್ಯಕರ್ತರು  ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಸಹಾಯಕ ಕೃಷಿ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದರು.

ವೇದಿಕೆಯ ತಾಲ್ಲೂಕು ಅಧ್ಯಕ್ಷ ಪಿ.ಶಿವಕು ಮಾರನಾಯ್ಕ ಮಾತನಾಡಿ, ತಾಲ್ಲೂಕಿನ ಬಹು ಭಾಗಗಳಲ್ಲಿ ರೈತರು ಈರುಳ್ಳಿ ಬೆಳೆಯನ್ನು ಬೆಳೆ ಯುತ್ತಿದ್ದು, ಈ ಬೆಳೆಗಳ ಮೇಲೆ ಕುಟುಂಬಗಳು ಅವಲಂಬಿತರಾಗಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಈರುಳ್ಳಿ ಬೆಳೆಗೆ ಹಲವು ರೋಗ ಬಂದು ರೈತರು ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಒಳಗಾಗಿದ್ದಾರೆ. ಸಮೀಕ್ಷೆ ಸರಿಯಾಗಿ ಆಗುತ್ತಿಲ್ಲ. ಅರ್ಹ ಫಲಾನುಭವಿಗಳು ಪರಿಹಾರ ಪಡೆಯುವಲ್ಲಿ ವಂಚಿತರಾಗುತ್ತಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಅವರು ದೂರಿದರು.

ಪ್ರಧಾನ ಕಾರ್ಯದರ್ಶಿ ನಾಗರಾಜ ವಾಲ್ಮೀಕಿ ಮಾತನಾಡಿ ರೈತರು ಬೆಳೆದ ಬೆಳೆಗಳ ಕುರಿತು ಸರಿಯಾಗಿ ಸಮೀಕ್ಷೆ ಮಾಡದೇ ರೈತರಿಗೆ ಸರಿಯಾದ ಮಾರ್ಗವಿಲ್ಲದೆ ರೈತರಿಗೆ ನೀವೇ ಸಮೀಕ್ಷೆ ಮಾಡಿಕೊಳ್ಳಿರಿ ಎಂದು ಅಧಿಕಾರಿಗಳು ಹೇಳುತ್ತಿರುವುದು ವಿಪರ್ಯಾಸವಾಗಿದೆ. ತಾಂತ್ರಿಕ ತಿಳಿವಳಿಕೆಯಲ್ಲಿ ರೈತರು ಹಿಂದುಳಿದಿದ್ದು, ಬೆಳೆ ನಷ್ಟ ವಾದರೆ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಾರೆ. ಅನಿವಾರ್ಯವಾಗಿ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ದುರ್ಘಟನೆಗಳು ನಡೆಯದಂತೆ ತಡೆ ಹಿಡಿಯಬೇಕಾದರೆ ಸರ್ಕಾರ ದಿಂದ ಸಕಾಲಕ್ಕೆ ಸಿಗುವಂತಹ ಸೌಲಭ್ಯಗಳು ನೇರವಾಗಿ ಮತ್ತು ಜರೂರಾಗಿ ರೈತರಿಗೆ ಸೇರ ಬೇಕು. ಕೃಷಿ ಇಲಾಖೆಯಿಂದ ರೈತರು ಬೆಳೆದ ಬೆಳೆಗಳ ಕುರಿತು ಸಮೀಕ್ಷೆ ನಡೆಸಿ ರೈತರಿಗೆ ಸಿಗು ವಂತಹ ಎಲ್ಲಾ ಸೌಲಭ್ಯಗಳು ಮತ್ತು ಪರಿಹಾರ ಗಳನ್ನು ಕೂಡಲೇ ರೈತರಿಗೆ ನೀಡಬೇಕೆಂದು  ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಂಘಟನಾ ಕಾರ್ಯದರ್ಶಿ ಮಜ್ಜಿಗೇರಿ ಮಲ್ಲಿಕಾರ್ಜುನ ಸೇರಿದಂತೆ ಅನೇಕ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!