ಲಯನ್ಸ್ ನಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

ದಾವಣಗೆರೆ, ಆ.18- ನಗರದ ಲಯನ್ಸ್  ಕ್ಲಬ್ ವತಿಯಿಂದ ನಡೆಯುತ್ತಿರುವ ಲಯನ್ಸ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ   ಹಾಗೂ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಲಯನ್ಸ್ ಶಾಲೆಯಲ್ಲಿ ಆಚರಿಸಲಾಯಿತು.

ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಎ.ಜೆ.ತೇಜಸ್ವಿನಿ, ವೈ.ನವೀನ್ ಹಾಗೂ ನೇತ್ರಾ ಗೌಡ ಅವರುಗಳನ್ನು ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ವಿಜಯ್ ಕುಮಾರ್ ಅವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಕೋರಿ ಶಿವಕುಮಾರ್, ಖಜಾಂಚಿ ಸಂಪತ್ ಬಿ.ಹಳ್ಳಿಕೆರೆ, ಲಯನ್ಸ್ ಮಾಜಿ ರಾಜ್ಯಪಾಲ ಜಿ.ನಾಗನೂರು ಜಿಲ್ಲಾ ಲಯನ್ಸ್ ಛೇರ್ಮನ್ ಬೆಳ್ಳೂಡಿ, ಶಿವಕುಮಾರ್, ಲಯನ್ಸ್ ಟ್ರಸ್ಟ್ ಕಾರ್ಯದರ್ಶಿ ಅಜ್ಜಂಪುರ ಶೆಟ್ರು ಮೃತ್ಯುಂಜಯ, ಲಯನ್ಸ್ ಕ್ಲಬ್ ನಿರ್ದೇಶಕರಾದ ಕಣಕುಪ್ಪಿ ಮುರುಗೇಶಪ್ಪ, ಎನ್.ಸಿ. ಬಸವರಾಜು, ಕೆ.ಮಲ್ಲಿಕಾರ್ಜುನ್, ಲಯನ್ಸ್ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!