ಭಾರತೀಯರು ನಾವು ಶಾಂತಿ ಅಹಿಂಸೆಯ
ಹಾದಿಯಲಿ ತರಹೇವಾರಿ ಸದ್ಭಾವನೆಯ
ಮಂತ್ರವ ಜಗಕೆ ಬಿತ್ತಿ ಐಕ್ಯಮತದ ತತ್ವದಿ
ಸಹಬಾಳ್ವೆಯನು ತೋರಿಪ ಸಹೃದಯಿಗಳು ನಾವು.
ಪ್ರಾಂತ್ಯ ಪ್ರಾಂತ್ಯಗಳಲ್ಲೂ ಪ್ರಕೃತಿಯ
ಸೊಬಗಿನಂತೆ ಉಡುಗೆ ತೊಡುಗೆಯೊಡನೆ
ರೀತಿ ನೀತಿ ಚೆಂದದಂತೆ ಸಂಸ್ಕೃತಿಯ
ಚೆಲುವ ಚೆಲ್ಲುತಿಹ ಸಾಮ್ಯತೆಯ ಸಹಜೀವಿಗಳು ನಾವು.
ನೂರು ಜಾತಿ-ಮತ-ಪಂಥಗಳ ಪೋಷಿಸಿ
ಭೇದವೆಣಿಸದೆ ಎಲ್ಲರನು ಸಮಾನರೆಂಬ
ಸಮಾನತೆಯ ತತ್ವದಿ ಬಂಧಿಸಿ ಏಕಮತ
ಏಕಪೌರತ್ವವ ಎತ್ತಿ ಹಿಡಿವ ಹೆಮ್ಮೆಯ
ಸಂವಿಧಾನ ಹೊಂದಿದ ಭಾರತೀಯ ಪ್ರಜೆಗಳು ನಾವು.
ಯುದ್ಧ ಬರಲಿ ಭೀಕರ ರೋಗ ಬರಲಿ
ಪ್ರಕೃತಿಯು ಮುನಿದ ವಿಪತ್ತಿನ ದಿನಗಳೇ ಬರಲಿ
ಎಲ್ಲರೊಂದೆ ಎಂಬ ಮನೋಭಾವದಲಿ
ಹೆದರಿಸುವೆವು ಧೃತಿಗೆಡದ ರೀತಿಯಲಿ
ನಾವು ಭಾರತೀಯರೆಂಬ ಹೆಮ್ಮೆಯಲಿ.
ಅಂಶು ಬೆಳುವಳ್ಳಿ
ಮಾಡೆಲ್ ಶಾಲೆ ಜಾವಗಲ್
[email protected]