ಜಗದ್ಗುರು ಮುರುಘರಾಜೇಂದ್ರ ಶಿವಾಯೋಗಾಶ್ರಮ ಟ್ರಸ್ಟ್ ಖಜಾಂಚಿಗಳೂ, ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ನಿವೃತ್ತ ಉಪ ಪ್ರಧಾನ ವ್ಯವಸ್ಥಾಪಕರೂ ಆದ ಪಲ್ಲಾಗಟ್ಟೆ ಕೊಟ್ಟೂರೇಶ್ವರಪ್ಪ ಅವರು ಇಂದು ಸಂಜೆ 5.30ಕ್ಕೆ ನಿಧನರಾದರು. ಮೃತರಿಗೆ ಸುಮಾರು 77 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಸೊಸೆ, ಅಳಿಯ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ನಾಳೆ ದಿನಾಂಕ 16ರ ಭಾನುವಾರ ಬೆಳಿಗ್ಗೆ 9.30ಕ್ಕೆ ನಗರದ ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024