ಹರಪನಹಳ್ಳಿ, ಆ. 15 – ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರು ಅಖಂಡ ಭಾರತ ನಿರ್ಮಾಣಕ್ಕೆ ಸಂಕಲ್ಪ ದಿನವನ್ನು ಪಂಜಿನ ಮೆರವಣಿಗೆ ಮೂಲಕ ಆಚರಿಸಿದರು.
ಪಟ್ಟಣದ ಹೀರೆಕೆರೆ ವೃತ್ತದಿಂದ ಪ್ರಮುಖ ರಸ್ತೆಗಳಲ್ಲಿ ಪಂಜಿನ ಮೆರವಣಿಗೆ ಪ್ರಾರಂಭಿಸಿದ ಕಾರ್ಯಕರ್ತರು ಪ್ರವಾಸಿ ಮಂದಿರ ವೃತ್ತದಲ್ಲಿ ನಿನ್ನೆ ಸಂಜೆ ಕೊನೆಗೊಳಿಸಿದರು.
ಮುಖಂಡ ಸುರೇಂದ್ರ ಮಂಚಾಲಿ ಮಾತ ನಾಡಿ, ಹರಿದು ಹಂಚಿ ಹೋಗಿರುವ ಭರತ ಖಂಡ ವನ್ನು ಮತ್ತೆ ಒಗ್ಗೂಡಿಸಲು ಈ ಸಂಕಲ್ಪ ದಿನಾಚರಣೆ ಯಾಗುತ್ತಿದೆ. ರಾಮಾಯಣ, ಮಹಾಭಾರತಗಳಲ್ಲಿ ಉಲ್ಲೇಖವಾಗಿರುವ ಭರತ ಖಂಡವನ್ನು ಮತ್ತೆ ಒಗ್ಗೂಡಿಸಬೇಕಾಗಿದೆ. ನಮ್ಮ ದೇಶದ ಅಣ್ಣ-ತಮ್ಮಂದಿರು ಅಕ್ಕ-ಪಕ್ಕದ ದೇಶಗಳಲ್ಲಿ ವಾಸಿಸುತ್ತಿ ದ್ದಾರೆ. ಅವರನ್ನೆಲ್ಲಾ ಮತ್ತೆ ಒಟ್ಟಾಗಿ ಬಾಳಲು ಅಖಂಡ ಭಾರತವನ್ನು ಪೂರ್ಣ ರೂಪಿಸಬೇಕಾ ಗಿದೆ. ಬಾಂಗ್ಲಾ, ಪಾಕಿಸ್ತಾನ, ಅಫ್ಘಾನಿಸ್ತಾನ, ನೇಪಾಳ ಹೀಗೆ ಹತ್ತು ಹಲವು ರಾಷ್ಟ್ರಗಳು ಈ ಹಿಂದೆ ಭರತ ಖಂಡದ ಭೂಪಟದಲ್ಲಿದ್ದವು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಇಗಿರುವ ಜನರಲ್ಲಿ ಶಾಂತಿ ಸಹಬಾಳ್ವೆಯ ಮಂತ್ರಗಳಿಂದಲೇ ಮತ್ತೆ ಒಗ್ಗೂಡಬೇಕಾಗಿದೆ. ಆದ್ದರಿಂದ ನಾವು ಸಂಕಲ್ಪ ಮಾಡಬೇಕು ಎಂದರು.
ಪುರಸಭೆ ಸದಸ್ಯರಾದ ಕಿರಣಕುಮಾರ್, ಮಂಜುನಾಥ ಇಜಂತಕರ್, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಹೆಚ್.ಎಂ.ಜಗದೀಶ್, ಮುಖಂಡರಾದ ಓಂಕಾರಗೌಡ, ಆಶೋಕ ಹಿಂದುಸ್ತಾನಿ, ಭರತ ಬೂದಿ, ಕೆ.ಸಂಗಮೇಶ್, ಪವನ ಪಾಟೀಲ್, ಎಂ. ವಾಗೀಶ್, ಆಶೋಕಜೀ, ಡಿ.ಹನುಮಂತ, ಆರ್.ರವಿನಾಯ್ಕ್, ಪ್ರವೀಣ, ಲಿಂಗನಗೌಡ, ಸುರೇಶ್, ಪ್ರದೀಪ, ವರುಣ್, ಪವನ್, ಪುಟ್ಟರಾಜು ಹಾಗೂ ಇತರರು ಭಾಗವಹಿಸಿದ್ದರು.