ರಾಣೇಬೆನ್ನೂರು, ಆ.15- ಸುಮಾರು ಎರಡು ನೂರು ವರ್ಷಗಳ ಕಾಲ ನಮ್ಮನ್ನಾಳಿದ ಬ್ರಿಟಿಷರು ನಮ್ಮತನ ಕಸಿದುಕೊಂಡಿದ್ದರು. ಅವರೊಡನೆ ಶಾಂತವಾಗಿ ಯುದ್ಧ ಮಾಡಿದ ನಮ್ಮ ನಾಯಕರು ನಮಗೆ ‘ನಮ್ಮತನ’ ದೊರಕಿಸಿಕೊಟ್ಟರು ಎಂದು ತಹಶೀಲ್ದಾರ ಬಸನಗೌಡ ಕೋಟೂರ ಹೇಳಿದರು.
ಇಲ್ಲಿನ ನಗರಸಭೆ ಕ್ರೀಡಾಂ ಗಣದಲ್ಲಿ ಸ್ವಾತಂತ್ರ್ಯ ದಿನದಂದು ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಶಾಸಕ ಅರುಣಕುಮಾರ ಗುತ್ತೂರ ಅಧ್ಯಕ್ಷತೆ ವಹಿಸಿದ್ದರು.
ಅಲ್ಲಲ್ಲಿ ದ್ವಜಾರೋಹಣ: ಅಶೋಕ ಸರ್ಕಲ್ನಲ್ಲಿ ನಗರಾಭಿವೃದ್ದಿ ಯೋಜನಾಧಿ ಕಾರಿ ವೀರೇಂದ್ರ ಕುಂದಗೋಳ, ನಗರಸಭೆಯಲ್ಲಿ ಪೌರಾಯುಕ್ತ ಡಾ. ಮಹಾಂತೇಶ, ವರ್ತಕರ ಸಂಘದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಸದಾನಂದ ಉಪ್ಪಿನ, ಸಿದ್ದೇಶ್ವರ ಬ್ಯಾಂಕ್ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಬ್ಯಾಂಕ್ ಅಧ್ಯಕ್ಷ ಎಂ.ಎಸ್. ಅರಕೇರಿ ಗಂಗಾ ಬ್ಯಾಂಕ್ನಲ್ಲಿ ಅಧ್ಯಕ್ಷ ರತ್ನಾಕರ ಕುಂದಾಪುರ, ಚನ್ನೇಶ ಬ್ಯಾಂಕ್ನಲ್ಲಿ ಕೆ. ಶಿವಲಿಂಗಪ್ಪ, ರಾಜರಾಜೇಶ್ವರಿಯಲ್ಲಿ ಅಧ್ಯಕ್ಷ ಪಿ. ಲಿಂಗನಗೌಡ, ನೆಹರು ಮಾರ್ಕೆಟ್ನಲ್ಲಿ ಅಧ್ಯಕ್ಷ ವಿ.ಪಿ.ಲದ್ವಾ, ಎಪಿಎಂಸಿಯಲ್ಲಿ ಅಧ್ಯಕ್ಷ ಬಸವರಾಜ ಸವಣೂರ, ತಾಪಂ ನಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಗೀತಾ ಲಮಾಣಿ ಧ್ವಜಾರೋಹಣ ನೆರವೇರಿಸಿದರು.