ಹರಪನಹಳ್ಳಿ, ಆ. 16 – ಕಳೆದ ಒಂದು ವರ್ಷದಿಂದ ಹರಪನಹಳ್ಳಿ ತಾಲ್ಲೂಕನ್ನು ಜಿಲ್ಲೆಯನ್ನಾಗಿ ಮಾಡಬೇಕು ಎಂದು ತಾಲ್ಲೂಕಿನ ಪ್ರಗತಿಪರ ಸಂಘಟನೆಗಳು ಹಾಗೂ ತಾಲ್ಲೂಕಿ ಸಾರ್ವಜನಿಕರ ಕೂಗೂ ನಿರಂತರವಾಗಿ ಕೇಳಿಬರುತ್ತಿದೆ ಆದರೆ ರಾಜ್ಯದ ಅರಣ್ಯ ಸಚಿವ ಆನಂದ್ ಸಿಂಗ್ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚಾರಣೆಯ ಧ್ವಜಾರಹೋಣ ಕಾರ್ಯಕ್ರಮದಲ್ಲಿ 2021 ರ ಒಳಗಾಗಿ ವಿಜಯನಗರ ಜಿಲ್ಲೆಯನ್ನಾಗಿ ಮಾಡುತ್ತೇನೆ ಎಂದು ನಿಖಾರವಾಗಿ ಹೇಳಿರುವ ಸಚಿವರ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಹರಪನಹಳ್ಳಿ ತಾಲೂಕಿನ ಜಿಲ್ಲಾ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಇದ್ಲಿ ರಾಮಪ್ಪ ತಿಳಿಸಿದರು.
ಸಚಿವ ಆನಂದ್ ಸಿಂಗ್ ಈ ರೀತಿ ಹೇಳಿಕೆ ನೀಡುವುದರಿಂದ ತಾಲೂಕಿನ ಜನರ ಶಾಂತಿಯನ್ನು ಕೆದಕುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬಳ್ಳಾರಿ ಜಿಲ್ಲೆಯ ಜನತೆ ವಿಜಯನಗರ ಜಿಲ್ಲೆಯನ್ನಾಗಿ ಮಾಡುವುದಕ್ಕೆ ಯಾರು ಕೂಡ ಒಲವು ತೋರುತಿಲ್ಲಿ ಈ ಸಂಬಂಧ ಹೂವಿನ ಹಡಗಲಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿನ ಜನರು ತೀವ್ರವಾಗಿ ಖಂಡಿಸುತ್ತಿದ್ದಾರೆ, ಆದರೆ ಸಚಿವರು ಹೊಸಪೇಟೆ ಜನರನ್ನು ಮೆಚ್ಚುಗೆ ವ್ಯಕ್ತಪಡಿಸುವ ಸಲುವಾಗಿ ಇಂತಹ ಹೇಳಿಕೆಯನ್ನು ನೀಡುತ್ತಿದ್ದಾರೆ. ಇವರ ಹೇಳಿಕೆ ಬರಿ ಇವರ ಖುರ್ಚಿಗಾಗಿ ಮಾತ್ರ ವಿವರಿಸುತ್ತಿದ್ದಾರೆ ಹೊರತು ಅವರ ಹೇಳಿಕೆ ಸರ್ಕಾರದ ಮಟ್ಟದಲ್ಲಿ ಪ್ರಸ್ತಾವನೆ ಆಗುವುದಿಲ್ಲಿ ಎಂದು ನಿರಾಕರಿಸಿದರು.
ಬಳ್ಳಾರಿ ಜಿಲ್ಲೆಯ ಪಶ್ವಿಮ ತಾಲ್ಲೂಕುಗಳಾದ ಹೂವಿನ ಹಡಗಲಿ, ಹರಪನಹಳ್ಳಿ, ಕೊಟ್ಟೂರು, ತಾಲ್ಲೂಕಿನ ಗಡಿಭಾಗದ ಜನರಿಗೆ ಬಳ್ಳಾರಿ ಜಿಲ್ಲೆಗೆ ಹೋಗುವದಕ್ಕೆ ಸೂಮಾರು 250 ಕಿ.ಮೀ. ದೂರವಾಗುತ್ತದೆ ಹೋಗುವದಕ್ಕೆ 5 ರಿಂದ 6 ಗಂಟೆ ಸಂಚಾರವಾಗುತ್ತದೆ ಯಾವುದಾದರೂ ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಬೇಕಾದರೆ ಸಮಯವೇ ಸಾಕಾಗುವದಿಲ್ಲ. ಆದ್ದರಿಂದ ತಾಲ್ಲೂ ಕಿನ ಜನರಿಗೆ ಅನಾನುಕೂಲ ಉಂಟಾಗುತ್ತದೆ ಈ ಎಲ್ಲಾ ವಿಚಾರವನ್ನು ಒಳಗೊಂಡು ದೂರದ ಜಿಲ್ಲೆಯ ಸದ್ಯ ಕೆಲ ಉಪಕೇಂದ್ರಗಳನ್ನು ತಾಲ್ಲೂಕು ಮಿನಿ ವಿಧಾನ ಸೌಧದಲ್ಲೆ ತೆರೆಯಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.