ಬಿಸಿಯೂಟ ತಯಾರಕರಿಗೆ ವೇತನ ನೀಡುವಂತೆ ಆಗ್ರಹ

ಹರಪನಹಳ್ಳಿ, ಆ. 14 – ಬಿಸಿಯೂಟ ತಯಾರಕರಿಗೆ ವೇತನ   ನೀಡುವಂತೆ  ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ  ತಯಾರಕರ ಫೆಡರೇಷನ್ ತಾಲ್ಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಎಐಟಿಯುಸಿ ಕಾರ್ಯರ್ದರ್ಶಿ ಗುಡಿಹಳ್ಳಿ ಹಾಲೇಶ್ ಮಾತನಾಡಿ, ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರಿಗೆ ಪರಿಹಾರ ನೀಡಿದಂತೆ ಬಿಸಿಯೂಟ ತಯಾರಿಕರಿಗೂ ನೀಡಬೇಕು ಎಂದು ಒತ್ತಾಯಿಸಿದರು.

ಎಐಟಿಯುಸಿ ಅಧ್ಯಕ್ಷರಾದ ಪುಷ್ಪ ಮಾತನಾಡಿ,  ಕಳೆದ ಶೈಕ್ಷಣಿಕ ವರ್ಷದ ಕೊನೆಯಲ್ಲಿ ದೇಶಕ್ಕೆ ಅವರಿಸಿದ ಕೋವಿಡ್-19 ಪರಿಣಾಮವಾಗಿ ಬಿಸಿಯೂಟ ತಯಾರಕರು ಸಂಕಷ್ಠ ಅನುಭವಿಸುವಂತಾಯಿತು. ಇತ್ತ ಶಾಲೆಗಳಲ್ಲಿ ಅಡುಗೆ ಕೆಲಸವೂ ಇಲ್ಲ ಅತ್ತ ಬೇರೆ ಕಡೆ ಕೂಲಿಯೂ ಇಲ್ಲದೇ ಬಿಸಿಯೂಟ ತಯಾರಕರು ಪರಿತಪಿಸು ತ್ತಿದ್ದು 4 ತಿಂಗಳ ವೇತನ ನೀಡಬೇಕು ಎಂದರು.

ಪ್ರತಿಭಟನೆಯಲ್ಲಿ ರೇಣುಕಮ್ಮ, ಬಸಮ್ಮ, ಹನುಮಕ್ಕ, ವಿಶಾಲಮ್ಮ, ಎ.ಕೆ. ಮಂಜಮ್ಮ, ದ್ಯಾಮವ್ವ, ಫಾತೀಮ, ಸಾವಿತ್ರಮ್ಮ, ಗೀತಮ್ಮ, ಹಾಲಮ್ಮ, ರತ್ನಮ್ಮ, ಹನುಮಜ್ಜಿ ಸೇರಿದಂತೆ ಇತರರಿದ್ದರು.

error: Content is protected !!