ದಾವಣಗೆರೆ, ಆ. 14 – ಕೋವಿಡ್ ಟೆಸ್ಟ್‍ಗೊ ಳಗಾದ ನಾಲ್ಕು ಬಾರಿಯೂ ನೆಗೆಟಿವ್ ಬಂದಿದೆ. ಕೋವಿಡ್ ಭೀತಿಯ ನಡುವೆಯೂ ಕ್ಷೇತ್ರದಲ್ಲಿ ಸಾರ್ವಜನಿಕರ ಹಿತಕ್ಕಾಗಿ ಹಲವಾರು ಕಾರ್ಯ ಗಳನ್ನು ಕೈಗೊಂಡಿದ್ದೇನೆ. ತಮ್ಮ ಕುಟುಂಬದ ಆರೋಗ್ಯ ಎಷ್ಟು ಮುಖ್ಯವೋ ಸಾರ್ವಜನಿಕರ ಆರೋಗ್ಯವೂ ತಮಗೆ ಅಷ್ಟೇ ಮುಖ್ಯ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ.
ನಾನು ಇದುವರೆಗೂ ಮೂರು ಬಾರಿ ಆಂಟಿಜೆನ್ ರಾಪಿಡ್ ಟೆಸ್ಟ್ ಮಾಡಿಸಿದ್ದು, ನೆಗೆಟಿವ್ ಬಂದಿದೆ. ಅಲ್ಲದೇ, ನಾಲ್ಕನೇ ಬಾರಿಗೆ ಆರ್‍ಟಿ ಪಿ.ಸಿ.ಆರ್. ಟೆಸ್ಟ್ ಮಾಡಿಸಿದ್ದು, ನಾಲ್ಕನೇ ಬಾರಿಯೂ ಕೋವಿಡ್ ನೆಗೆಟಿವ್ ವರದಿ ಬಂದಿದೆ.
ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ತಮ್ಮ ಪುತ್ರ ಸ್ವದೇಶಕ್ಕೆ ಮರಳಿದ್ದು, ಇವರ ಕೋವಿಡ್ ಟೆಸ್ಟ್ ವರದಿಯೂ ನೆಗೆಟಿವ್ ಬಂದಿದೆ. ಅಮೆರಿಕದಲ್ಲಿ ಹೆಚ್ಚು ಸೋಂಕು ವ್ಯಾಪಿಸಿದ್ದರಿಂದ ಆತಂಕಕ್ಕೊಳಗಾಗಿದ್ದೆವು. ಇದೀಗ ತಮ್ಮ ಪುತ್ರನ ಟೆಸ್ಟ್ ವರದಿ ನೆಗೆಟಿವ್ ಬಂದಿರುವುದರಿಂದ ಆತಂಕ ನಿವಾರಣೆಯಾಗಿದೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.