ಫ್ರಾಂಚೈಸಿ ನೆಪದಲ್ಲಿ ನಂಬಿಸಿ 58.55 ಲಕ್ಷ ರೂ. ವಂಚನೆ ಆರೋಪ

ದಾವಣಗೆರೆ, ಆ.13- ಹರಿಯಾಣ ಮೂಲದ ಸಂಸ್ಥೆಯೊಂದರ ಫ್ರಾಂಚೈಸಿ ನೀಡುವುದಾಗಿ ಹೇಳಿ ನಂಬಿಸಿ 58.55 ಲಕ್ಷ ರೂ. ಹಣ ವಂಚಿಸಿರುವುದಾಗಿ ಕೆ.ಎಂ.ಜಿ. ಪ್ರಸನ್ನ ತಿಳಿಸಿದರು.

ಹರಿಯಾಣದ ಫ್ಯೂಚರ್ ಮೇಕರ್ ಕೇರ್ ಬ್ಯೂಟಿ ಲಿಮಿಟೆಡ್ ಎಂಬ ಹೆಸರಿನ ಸಂಸ್ಥೆ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲವರು ಕಳೆದ 2 ವರ್ಷಗಳ ಹಿಂದೆ ಅಂದರೆ 2018 ರಲ್ಲಿ ತಮ್ಮನ್ನು ಸಂಪರ್ಕಿಸಿದ ಹರಿಯಾಣದ ಫ್ಯೂಚರ್ ಮೇಕರ್ ಕೇರ್ ಬ್ಯೂಟಿ ಲಿಮಿಟೆಡ್  ಸಂಸ್ಥೆಯ ಸಂಜಯ್ ಶರ್ಮ, ರಾಧೆ ಶ್ಯಾಮ್, ಗಗನ್ ಶರ್ಮ, ಮನೀಷ್ ಶರ್ಮ, ರಿಷಿ ಕುಮಾರ್ ಹಾಗೂ ರಾಜೀವ್ ಕುಮಾರ್ ಎಂಬುವರು ಕಂಪನಿಯ ಫ್ರಾಂಚೈಸಿ ನೀಡುವು ದಾಗಿ ಹೇಳಿ 7ರಿಂದ 8 ಕಂತಿನಲ್ಲಿ 58.85 ಲಕ್ಷ ರೂ. ಬ್ಯಾಂಕ್ ಖಾತೆಗೆ ಹಣ ಹಾಕಿಸಿ ಕೊಂಡಿದ್ದರು. ಆದರೆ ಫ್ರಾಂಚೈಸಿ ಬಗ್ಗೆ ವಿಚಾರಿ ಸಿದರೆ ಯಾರೂ ಸ್ಪಂದಿಸುತ್ತಿಲ್ಲ. ನನ್ನಂತೆಯೇ ನೂರಾರು ಜನರನ್ನು ವಂಚಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅಳಲಿಟ್ಟರು.

ಹಣ ಪಾವತಿಸಿದ ಬಗ್ಗೆ ತಮ್ಮ ಬಳಿ ಎಲ್ಲಾ ದಾಖಲೆಗಳಿವೆ. ಫ್ರಾಂಚೈಸಿ ನೀಡಿ ಇಲ್ಲ ಹಣ ಹಿಂದಿರುಗಿಸುವಂತೆ ಕೇಳಿದಾಗ ಕಂಪನಿಯವರು ಜೀವ ಬೆದರಿಕೆ ಹಾಕಿದ್ದಾರೆ. ತಮಗೆ ವಂಚನೆಯಾಗಿರುವ ಹಾಗೂ ಜೀವ ಬೆದರಿಕೆ ಇರುವ ಕುರಿತು ಪೊಲೀಸರಿಗೆ ದೂರು ನೀಡಿದ್ದರೂ ಪ್ರಕರಣದ ತನಿಖೆಯನ್ನು ಸರಿಯಾಗಿ ಮಾಡದೆ ದೂರಿನ ಅರ್ಜಿಯನ್ನು ಮುಕ್ತಾಯಗೊಳಿಸಿರುವುದಾಗಿ ಪೊಲೀಸರು ಹಿಂಬರಹ ನೀಡಿದ್ದಾರೆ ಎಂದು ಆರೋಪಿಸಿದರು.

ತಾವು ನ್ಯಾಯಕ್ಕಾಗಿ ಪೂರ್ವ ವಲಯ ಐಜಿಪಿಯವರನ್ನು ಭೇಟಿಯಾಗಿ ತಮಗಾದ ಅನ್ಯಾಯದ ಬಗ್ಗೆ ವಿವರಿಸುವುದಾಗಿ ಹೇಳಿದರು.

error: Content is protected !!