ಮಾಳಗೊಂಡನಹಳ್ಳಿಯಲ್ಲಿ ಶವ ಪತ್ತೆ

ಮಾಳಗೊಂಡನಹಳ್ಳಿಯಲ್ಲಿ ಶವ ಪತ್ತೆ - Janathavaniದಾವಣಗೆರೆ, ಆ.12- ತಾಲ್ಲೂಕಿನ ಮಾಳಗೊಂಡನಹಳ್ಳಿ ಗ್ರಾಮದ 3ನೇ ಹಳ್ಳದ ಹತ್ತಿರ ಸುಮಾರು 30-40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ನಿನ್ನೆ ಪತ್ತೆಯಾಗಿದೆ. 

ದುಂಡು ಮುಖ, ಕಪ್ಪು ಕೂದಲು, ಕೆಂಪು ಬಣ್ಣದ ಅಂಗಿ, ಬಿಳಿ ಬಣ್ಣದ ಬನಿಯನ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುವ ಈ ವ್ಯಕ್ತಿಯ ದೇಹವು ಮುಖ ಕೆಳಗಾಗಿ ಬಿದ್ದಿರುತ್ತದೆ. ಈ ಚಹರೆಯುಳ್ಳ ವ್ಯಕ್ತಿಗೆ ಸಂಬಂಧಪಟ್ಟವರು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು.

error: Content is protected !!