ಮಲೇಬೆನ್ನೂರು, ಆ. 12- ಪಟ್ಟಣದಲ್ಲಿರುವ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಸೋಮವಾರ ದಿಢೀರ್ ಭೇಟಿ ನೀಡಿದ ಉಪ ಕೃಷಿ ನಿರ್ದೇಶಕ ಶಿವಕುಮಾರ್, ಸಹಾಯಕ ಕೃಷಿ ನಿರ್ದೇಶಕ ಗೋವರ್ಧನ್ ಅವರು ಯೂರಿಯಾ ಗೊಬ್ಬರ ದಾಸ್ತಾನು ಇರುವುದನ್ನು ಪರಿಶೀಲಿಸಿ, ರೈತರಿಗೆ ಸಮರ್ಪಕವಾಗಿ ವಿತರಿಸುವಂತೆ ಅಂಗಡಿ ಮಾಲೀಕರಿಗೆ ಸೂಚನೆ ನೀಡಿದರು. ನಂತರ ಗ್ರಾಮೀಣ ಪ್ರದೇಶದಲ್ಲಿರುವ ಮಾರಾಟ ಮಳಿಗೆಗಳಿಗೂ ಭೇಟಿ ನೀಡಿ, ದಾಸ್ತಾನು ವೀಕ್ಷಿಸಿದರು. ಕೃಷಿ ಅಧಿಕಾರಿ ನಟರಾಜ್ ಈ ವೇಳೆ ಹಾಜರಿದ್ದರು.
December 25, 2024