ರಾಣೇಬೆನ್ನೂರು, ಆ.12- ಶೇ.80 ರಷ್ಟು ರೈತರು ಒಕ್ಕಲುತನದಿಂದ ಹೊರಬರುವ ಹಾಗೂ ಬಂಡವಾಳ ಶಾಹಿಗಳು ಕೃಷಿಕ್ಷೇತ್ರವನ್ನು ಆಕ್ರಮಿ ಸಲು ಮಾಡಿರುವ ಎಪಿಎಂಸಿ ಹಾಗೂ ಭೂಸ್ವಾದೀನ ಮತ್ತು ಬಡವರ ಭಾಗ್ಯಜ್ಯೋತಿ, ಕುಟೀರಜ್ಯೋತಿ ಯೋಜನೆಗಳು ಕಣ್ಮರೆ ಆಗುವ ವಿದ್ಯುತ್ ಶಕ್ತಿ ಕಾಯ್ದೆಗಳ ತಿದ್ದುಪಡಿಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ, ರಾಜ್ಯ ರೈತ ಸಂಘ ಪ್ರತಿಭಟಿಸಿ, ತಹಶೀಲ್ದಾರ್‌ರಿಗೆ ಮನವಿ ಸಲ್ಲಿಸಿತು.
`ಕಾರ್ಪೊರೇಟ್ ಕಂಪನಿಗಳೇ ಕೃಷಿ ಬಿಟ್ಟು ತೊಲಗಿ’ ಘೊಷಣೆಯೊಂದಿಗೆ ನ್ಯಾಯಾಲಯದ ಬಳಿ ನಡೆದ ಪ್ರತಿಭಟಿನೆಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ರವಿ ಪಾಟೀಲ್, ಸುರೇಶ್ ಅಗಸಿಬಾಗಿಲ, ಬಿ.ಕೆ.ರಾಜನಹಳ್ಳಿ, ಕರಬಸಪ್ಪ ಕೂಲೇರ, ಹೆಚ್.ಕೆ.ಜೀವನಗೌಡ್ರ, ಹನುಮಂತಪ್ಪ ಕಬ್ಬಾರ, ಜಯಣ್ಣ ಮಾಗನೂರ, ಮೆಹಬೂಬ್ ಅಲಿ ಮುದೇನೂರು ಮತ್ತಿತರರಿದ್ದರು.