ಜಗಳೂರು, ಆ.12- ರಾಜ್ಯವ್ಯಾಪಿ ಕರೆ ನೀಡಿರುವ ಜೆಸಿಟಿಯು ನೇತೃತ್ವದಲ್ಲಿ ಎಐಟಿಯುಸಿ, ಸಿಐಟಿಯು,ಎಸ್‌ಎಫ್‌ಐ, ಎಐಎಸ್‌ಎಎಫ್ ಜಂಟಿ ಹೋರಾಟ ಸಮಿತಿಯವರು ಅಖಿಲಭಾರತ ಮುಷ್ಕರಕ್ಕೆ ಬೆಂಬಲಿಸಿ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.
ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ಜಮಾಯಿಸಿ ನಂತರ ಪ್ರಭಾರ ತಹಶೀಲ್ದಾರ್ ರಾಮಚಂದ್ರಪ್ಪ ಅವರ ಮೂಲಕ ಸರ್ಕಾರಕ್ಕೆ ಲಿಖಿತ ಮನವಿ ಸಲ್ಲಿಸಿದರು.
ಮಾತೃ ಭಾಷೆಯ ಹೆಸರಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಲು ಹೊರಟಿದೆ. ಕೇಂದ್ರ ಸರ್ಕಾರ ಶಿಕ್ಷಣಕ್ಕೆ ನೀಡುವ ಹೆಚ್ಚಿನ ಹಣಕಾಸಿನ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಹಾಗೂ ಪಂಚಾಯಿತಿ ಮಟ್ಟದಲ್ಲಿ ಕಾಂಪ್ಲೆಕ್ಸ್ ಮಾದರಿ ಶಾಲೆ ತೆರೆಯಲು ಹೊರಟಿದೆ . ಇದರಿಂದ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಇವುಗಳನ್ನು ಕೈಬಿಟ್ಟು ಸರ್ಕಾರಿ ಹಾಸ್ಟೆಲ್ , ಕಾಲೇಜುಗಳನ್ನು ಬಲಪಡಿಸಿ ಸುಧಾರಿತ ಶಿಕ್ಷಣ ನೀತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಮುಖಂಡ ಆರ್. ಓಬಳೇಶ್, ಮಹಾಂ ತೇಶ, ಎಐಟಿಯುಸಿ ಮಹಮ್ಮದ್ ಭಾಷಾ, ವೀರಣ್ಣ, ಎಐಎಸ್‌ಎಫ್ ಮುಖಂಡ ಮಾದಿಹಳ್ಳಿ ಮಂಜುನಾಥ್, ಪದಾಧಿಕಾರಿ ಸಂದೀಪ್, ಎಸ್‌ಎಫ್‌ಐ ಜಿಲ್ಲಾ ಉಪಾಧ್ಯಕ್ಷ ಅನಂತ್ ರಾಜ್, ತಾಲ್ಲೂಕು ಅಧ್ಯಕ್ಷ ಅಂಜಿನಪ್ಪ , ರಾಜಪ್ಪ , ತಿಪ್ಪೇ ಸ್ವಾಮಿ , ಮಾರುತಿ, ಆರ್. ಸತ್ಯಮೂರ್ತಿ, ಸತೀಶ್ ಇನ್ನಿತರರು ಭಾಗವಹಿಸಿದ್ದರು.