ದಾವಣಗೆರೆ, ಆ. 10- ಜಿಲ್ಲೆಯಲ್ಲಿ ಸೋಮವಾರ 223 ಕೊರೊನಾಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 106 ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಗೊಳಿಸಲಾಗಿದ್ದು, 11 ಜನ ಸಾವನ್ನಪ್ಪಿದ್ದಾರೆ.
ದಾವಣಗೆರೆಯಲ್ಲಿ 113, ಹರಿಹರ ದಲ್ಲಿ 60, ಜಗಳೂರಿನಲ್ಲಿ 12, ಚನ್ನಗಿರಿ 20, ಹೊನ್ನಾಳಿ 17,ಹಾಗೂ ಅಂತರ್ ಜಿಲ್ಲೆಯಿಂದ 1, ಕೋವಿಡ್-19 ಪ್ರಕರಣ ಗಳು ವರದಿಯಾಗಿವೆ. ದಾವಣಗೆರೆಯಿಂದ 50, ಹರಿಹರ 23, ಚನ್ನಗಿರಿ 10, ಹೊನ್ನಾಳಿ 21, ಅಂತರ್ ಜಿಲ್ಲೆಯಿಂದ 1 ಸೇರಿದಂತೆ ಒಟ್ಟು 106 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 3658 ಪ್ರಕರಣಗಳುದಾಖಲಾಗಿದ್ದು, ಈ ಪೈಕಿ 2333 ಮಂದಿ ಸಂಪೂರ್ಣಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 100 ಸಾವುಸಂಭವಿಸಿದ್ದು, ಪ್ರಸ್ತುತ 1225 ಸಕ್ರಿಯಪ್ರಕರಣಗಳಿವೆ.
ಹರಿಹರದಲ್ಲಿ 65 ಕೊರೊನಾ ಪ್ರಕರಣ
ಹರಿಹರ : ನಗರದಲ್ಲಿ ಇಂದು 65 ವ್ಯಕ್ತಿಗಳಿಗೆ ಕೊರೊನಾ ಸೋಂಕು ಹರಡಿಕೊಂಡಿರುವುದು ದೃಢಪಟ್ಟಿದೆ ಎಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ತಿಳಿಸಿದ್ದಾರೆ.ನಗರದಲ್ಲಿ 399, ಗ್ರಾಮೀಣ ಪ್ರದೇಶ ಗಳಲ್ಲಿ 114 ಸೇರಿದಂತೆ ಇಲ್ಲಿಯವರೆಗೆ ಒಟ್ಟು 574 ವ್ಯಕ್ತಿಗಳಿಗೆ ಕೊರೊನಾ ಸೋಂಕು ಹರಡಿಕೊಂಡಿದ್ದು, ಹೋಂ ಐಸೋಲೇಶನ್ನಲ್ಲಿ 122, ದಾವಣಗೆರೆ ಸಿ.ಜಿ. ಆಸ್ಪತ್ರೆಯಲ್ಲಿ 131, ಕೋವಿಡ್ ಕೇರ್ ಸೆಂಟರ್ನಲ್ಲಿ 163, ನಗರದ ಸರ್ಕಾರಿ ಆಸ್ಪತ್ರೆಯಲ್ಲಿ 108 ವ್ಯಕ್ತಿಗಳು ಚಿಕಿತ್ಸೆ ಪಡೆಯುತ್ತಿದ್ದು, 331 ವ್ಯಕ್ತಿಗಳು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ. ಇಂದು 133 ವ್ಯಕ್ತಿಗಳಿಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ಇಲ್ಲಿಯವರೆಗೆ 8295 ವ್ಯಕ್ತಿಗಳಿಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ.
ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿದಂತೆ 207 ಕಂಟೋನ್ಮೆಂಟ್ ಝೋನ್ಗಳು ಇದ್ದು, ಅದರಲ್ಲಿ 99 ಕಂಟೈನ್ಮೆಂಟ್ ಝೋನ್ಗಳ ಅವಧಿ ಮುಕ್ತಯವಾಗಿ ಉಳಿದ 108 ಕಂಟೈನ್ಮೆಂಟ್ ಝೋನ್ನಲ್ಲಿ ವಾಸಿಸುವ ಸಾರ್ವಜನಿಕರಿಗೆ ಯಾವುದೇ ಅಗತ್ಯ ವಸ್ತುಗಳ ಕೊರತೆ ಬರದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಬಂದ್ : ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಏಳು ಜನರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಬಂದ್ ಮಾಡಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ನಾಳೆ ಎಲ್ಲಾ ಸಿಬ್ಬಂದಿಗಳು ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದು, ನಾಡಿದ್ದು ಕಚೇರಿ ಎಂದಿನಂತೆ ತೆರೆಯಲಿದೆ ಎಂದಿದ್ದಾರೆ.