ಅಂಗನವಾಡಿ ಕಾರ್ಯಕರ್ತೆಯರು – ಸಹಾಯಕಿಯರ ಪ್ರತಿಭಟನೆ

ದಾವಣಗೆರೆ, ಆ. 8- ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಗರದಲ್ಲಿ ನಿನ್ನೆ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ್ದ ಪ್ರತಿಭಟನಾಕಾರರು, ಜಿಲ್ಲಾಧಿ ಕಾರಿ ಮುಖಾಂತರ ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ಮೂಲಭೂತ ಸೇವೆಗಳಾದ ಆರೋಗ್ಯ (ಆಸ್ಪತ್ರೆಯನ್ನು ಒಳಗೊಂಡಂತೆ) ಪೋಷಕಾಂಶ ಗಳು ( ಐಸಿಡಿಎಸ್ ಯೋಜನೆ ಒಳಗೊಂಡು ) ಮತ್ತು ಶಿಕ್ಷಣ ಮುಂತಾದ ಅಗತ್ಯ ಮೂಲಭೂತ ಸೇವೆಗಳ ಖಾಸಗೀಕರಣದ ಪ್ರಸ್ತಾಪಗಳನ್ನು ಹಿಂಪಡೆಯಬೇಕು, ಸಾರ್ವಜನಿಕ ವಲಯದ ಉದ್ದಿಮೆಗಳ ಸಾರ್ವಜನಿಕ ಉದ್ದಿಮೆಗಳ ಮತ್ತು ಸೇವೆಗಳ ಖಾಸಗೀಕರಣ ನಿಲ್ಲಿಸಬೇಕು  ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಭಾರತ ರಾಷ್ಟ್ರೀಯ ಕಾರ್ಮಿಕ ಸಂಘಟನೆಗಳ 45 ಮತ್ತು 46 ಸಮ್ಮೇಳನಗಳ ಶಿಫಾರಸ್ಸಿನಂತೆ ಯೋಜನೆ ಕಾರ್ಮಿಕರನ್ನು ಅಧಿಕೃತವಾಗಿ ಕಾರ್ಮಿಕರು ಎಂದು ಖಾಯಂ ಮಾಡಿ  ಪ್ರತಿ ತಿಂಗಳಿಗೆ 21 ಸಾವಿರ ಕನಿಷ್ಟ ವೇತನ ಪಾವತಿಸಬೇಕು, ಮಾಸಿಕ 10 ಸಾವಿರ ಪಿಂಚಣಿ ನೀಡಿ ಎಲ್ಲಾ ಯೋಜನಾ ಕಾರ್ಮಿಕರಿಗೆ ಇಎಸ್‌ಐ ಮತ್ತು ಪಿಎಫ್ ಸೌಲಭ್ಯವನ್ನು ಒದಗಿಸಿಕೊಡಬೇಕು.

ಆಹಾರದ ಹಕ್ಕು ಮತ್ತು ಶಿಕ್ಷಣದ ಹಕ್ಕಿನಂತೆ ಸಾರ್ವತ್ರಿಕ ಆರೋಗ್ಯದ ರಕ್ಷಣೆಗೋಸ್ಕರ ಶಾಸನ ಜಾರಿ ಮಾಡಬೇಕು, ಕ್ರೋಢೀಕರಣದ ಹೆಸರಿ ನಲ್ಲಿ ಕಾರ್ಮಿಕ ಕಾನೂನುಗಳನ್ನು ಮಾಲೀಕರ ಪರವಾಗಿ ಬದಲಾಯಿಸುವ ಕೋವಿಡ್ ಅವ ಧಿಯ ನೆಪವೊಡ್ಡಿ ಕೆಲಸದ ಅವಧಿಯನ್ನು ಹೆಚ್ಚಿ ಸುವ ಮತ್ತು ಕಾರ್ಮಿಕ ಕಾಯ್ದೆಗಳನ್ನೇ ಸ್ಥಗಿತಗೊ ಳಿಸುವ ಕ್ರಮವನ್ನು ಕೈಬಿಡಬೇಕು, ಯೋಜನಾ ಕೆಲಸಗಾರರನ್ನು ಕಾರ್ಮಿಕರೆಂಬ ಶ್ರೇಣಿಗೆ ಸೇರಿಸಿ ಕಾನೂನು ಬದ್ಧವಾಗಿ ಕಾರ್ಮಿಕರೆಂದು ಜಾರಿ ಮಾಡಬೇಕು,  ಸರ್ಕಾರದಿಂದ ಗುರುತಿಸ ಲ್ಪಟ್ಟಿರುವ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ಪಡೆಯಲು ಹಾಗೂ ವೈದ್ಯರ ಸರ್ಟಿಫಿಕೇಟ್ ಆಧಾರದಲ್ಲಿ ಸಂಬಳ ಸಹಿತ ರಜೆ ಪಡೆಯುವಂತೆ ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯಾ ಧ್ಯಕ್ಷ ಹೆಚ್.ಕೆ. ರಾಮಚಂದ್ರಪ್ಪ, ಜಿಲ್ಲಾಧ್ಯಕ್ಷೆ ಎಂ.ಬಿ. ಶಾರದಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಮಲ್ಲಮ್ಮ, ರಾಜ್ಯ ಸಂಚಾಲಕರುಗಳಾದ ಆವರಗೆರೆ ಚಂದ್ರು, ಆವರಗೆರೆ ವಾಸು, ಎನ್.ಹೆಚ್. ರಾಮಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!