ಜಿಲ್ಲಾ ತೆರಿಗೆ ಸಲಹೆಗಾರರ ಭವನ ನಿರ್ಮಾಣಕ್ಕೆ ಸಿದ್ಧತೆ

ದಾವಣಗೆರೆ, ಆ. 8- ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ವತಿಯಿಂದ ರಾಷ್ಟ್ರೀಯ ತೆರಿಗೆ ಸಲಹೆ ಗಾರರ ದಿನಾಚರಣೆ ಹಾಗೂ ತೆರಿಗೆ ಸಲಹೆಗಾರರ ಸಂಘದ ಸಂಸ್ಥಾಪಕರ ದಿನಾಚರಣೆ ಯನ್ನು ನಗರದ ಜಯದೇವ ಮುರುಘ ರಾಜೇಂದ್ರ  ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಆಚರಿಸಲಾಯಿತು.

ಹುಬ್ಬಳ್ಳಿಯ ಹಿರಿಯ ತೆರಿಗೆ ಸಲಹೆಗಾರ ಮತ್ತು ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ಉಪಾಧ್ಯಕ್ಷ ಕೆ. ಅಕ್ಕಿ ಅವರು ದೀಪ ಬೆಳಗಿಸಿ,   ಕರ್ನಾಟಕ ರಾಜ್ಯದ ತೆರಿಗೆ ಸಲಹೆಗಾ ರರ ಸಂಘದ ಸಂಸ್ಥಾಪಕರಾಗಿದ್ದ ದಿ. ವಿ.ಬಿ. ಹೊಂಬಳ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಜಂಬಗಿ ರಾಜೇಶ್ ಪ್ರಾಸ್ತಾವಿಕವಾಗಿ ಮಾತ ನಾಡಿ, 1985ರಲ್ಲಿ ದಿ. ಎಸ್. ಕೊಟ್ರ ಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಸ್ಥಾಪನೆಗೊಂಡ ದಾವಣಗೆರೆ ಜಿಲ್ಲಾ ತೆರಿಗೆ ಸಲಹೆಗಾರರ ಸಂಘವು ಇಂದಿಗೆ 35 ವರ್ಷಗಳನ್ನು ಯಶಸ್ವಿ ಯಾಗಿ ಪೂರೈಸಿದೆ ಎಂದು ತಿಳಿಸಿದರು. ತೆರಿಗೆ ಸಲಹೆಗಾರರಿಗೆ ಮೌಲ್ಯವರ್ಧಿತ ತೆರಿಗೆ, ಸರಕು ಮತ್ತು ಸೇವಾ ತೆರಿಗೆ ಮತ್ತು ಆದಾಯ ತೆರಿಗೆಗಳ ಬಗ್ಗೆ ವಿಚಾರ ಸಂಕಿರಣ ಏರ್ಪಡಿಸಿ, ಉನ್ನತ ಮಟ್ಟದ ಶಿಕ್ಷಣ ಕೊಟ್ಟಿರುತ್ತೇವೆ ಎಂದರು.

ಇನ್ನೆರಡು ವರ್ಷಗಳ ಒಳಗಾಗಿ ತೆರಿಗೆ ಸಲಹೆಗಾರರ ಭವನ ಕಟ್ಟಿಸಲು ಬದ್ಧರಾಗಿದ್ದು, ಇದಕ್ಕೆ ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ,  ಶಾಸಕರುಗಳಾದ ಡಾ. ಶಾಮನೂರು ಶಿವಶಂಕ ರಪ್ಪ,  ಎಸ್.ಎ. ರವೀಂದ್ರನಾಥ್, ಹರಿಹರದ ಎಸ್. ರಾಮಪ್ಪ, ಜಗಳೂರಿನ ಎಸ್.ವಿ. ರಾಮ ಚಂದ್ರಪ್ಪ, ಹೊನ್ನಾಳಿಯ ಎಂ.ಪಿ. ರೇಣುಕಾ ಚಾರ್ಯ ಅವರುಗಳಿಗೆ ಮನವಿ ಮಾಡಿಕೊಳ್ಳ ಲಾಗಿದೆ. ಎಲ್ಲಾ ಶಾಸಕರು ಮತ್ತು ಲೋಕಸಭಾ ಸದಸ್ಯರು ತಮಗೆ ಸರ್ಕಾರದಿಂದ ಬರುವ ಅನು ದಾನದಲ್ಲಿ ತೆರಿಗೆ ಸಲಹೆಗಾರರ ಸಂಘದ ಭವನಕ್ಕೆ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಜಂಬಗಿ ರಾಧೇಶ್ ನೆನಪಿಸಿಕೊಂಡರು.

ಮುಂಬರುವ ದಿನಗಳಲ್ಲಿ ತೆರಿಗೆ ಸಲಹೆಗಾರರಿಗೆ ಅಂತರ್ಜಾಲದ ವೆಬೆಕ್ಸ್ ಮತ್ತು ಝೂಮ್ ಮೂಲಕ ಆದಾಯ ತೆರಿಗೆ ಮತ್ತು ಜಿಎಸ್‌ಟಿ ಬಗ್ಗೆ ವಿಚಾರ ಸಂಕಿರಣವನ್ನು ಜಿಎಸ್‌ಟಿ ಅಧಿಕಾರಿಗಳಿಂದ ಮತ್ತು ಆದಾಯ ತೆರಿಗೆ ಅಧಿಕಾರಿಗಳಿಂದ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೆ. ಅಕ್ಕಿ ಮಾತನಾಡಿ, ತೆರಿಗೆ ಸಲಹೆಗಾರರಿಗೆ ತಿಳುವಳಿಕೆ ನೀಡಿದರು. ದಾವಣಗೆರೆ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಸಂಸ್ಥಾಪಕರುಗಳಾದ ಟಿ. ಕೊಟ್ರೇಶ್, ಬಿ.ಜಿ. ಬಸವರಾಜಪ್ಪ ಮತ್ತು ರಘು ಜೋಶಿ ಅವರುಗಳನ್ನು ಗೌರವಿಸಲಾಯಿತು. 

ರಘು ಜೋಶಿ ಮಾತನಾಡಿ, ತೆರಿಗೆ ಸಲಹೆ ಗಾರರು ಈ ಹಿಂದೆ ವ್ಯಾಪಾರಸ್ಥರ ಮತ್ತು ಕೈಗಾರಿ ಕೋದ್ಯಮಿಗಳ ಲೆಕ್ಕ ಪುಸ್ತಕಗಳನ್ನು ತೆಗೆದು ಕೊಂಡು ಹೋಗಿ ಪರಿಶೀಲನೆ ಮಾಡಿಸುತ್ತಿದ್ದೇವೆ.   ಮುಂಬರುವ ದಿನಗಳಲ್ಲಿ ಅಂತರ್ಜಾಲದ ಮೂಲಕ ಆದಾಯ ತೆರಿಗೆ ಮತ್ತು ಸರಕು ಮತ್ತು ಸೇವಾ ತೆರಿಗೆಯ ಪುಸ್ತಕಗಳನ್ನು ಲೆಕ್ಕ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಯುವ ತೆರಿಗೆ ಸಲಹೆಗಾರರು ನಿಯಮ ಮತ್ತು ಕಾಯ್ದೆಗಳನ್ನು ತಿಳಿದುಕೊಂಡು ನಿಮ್ಮ ವ್ಯಾಪಾರಸ್ಥರ ನೋಟೀಸ್‌ಗೆ ಉತ್ತರಿಸುವುದು ಹಾಗೂ ಲೆಕ್ಕ ಪರಿಶೀಲಿಸುವುದು ಅಂತರ್ಜಾಲದ ಮೂಲಕ ಎಂದು ಕಿವಿಮಾತು ಹೇಳಿದರು.

ವೇದಿಕೆಯ ಮೇಲೆ ಹೆಚ್.ಎಸ್. ಮಂಜುನಾಥ್,  ಜಿ.ಎಸ್. ಜಗದೀಶ್, ಹೆಚ್.ಟಿ. ಸುಧೀಂದ್ರರಾವ್ ಉಪಸ್ಥಿತರಿದ್ದರು. ಸಿ. ವಿನಯ್ ಸ್ವಾಗತಿಸಿದರು. ಬಿ. ವಿನಯ್ ನಿರೂಪಿ ಸಿದರು. ಡಿ.ಎಂ. ರೇವಣಸಿದ್ದಯ್ಯ ವಂದಿಸಿದರು.

error: Content is protected !!