ದಾವಣಗೆರೆ ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷರೂ, ದಾವಣಗೆರೆ ನಾಯಕ ವಿದ್ಯಾರ್ಥಿ ನಿಲಯದ ಅಧ್ಯಕ್ಷರೂ ಆದ ಶ್ರೀ ಬಿ. ವೀರಣ್ಣ ಅವರ ಸಹೋದರಿ ಶ್ರೀಮತಿ ಬಿ.ಸಿದ್ದಮ್ಮ ಅವರು ದಿನಾಂಕ 26.12.2020ರ ಶನಿವಾರ ಸಂಜೆ 5.45ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 50 ವರ್ಷ ವಯಸ್ಸಾಗಿತ್ತು. ಪತಿ, ತಾಯಿ, ಸಹೋದರರು – ಸಹೋದರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಪಾರ್ಥಿವ ಶರೀರವನ್ನು ದಾವಣಗೆರೆಯ ವೀರ ಮದಕರಿ ನಾಯಕ (ಹೊಂಡದ ಸರ್ಕಲ್) ವೃತ್ತದ ಬಳಿ ಇರುವ ಅವರ ಸ್ವಗೃಹದಲ್ಲಿ ದಿನಾಂಕ 27.12.2020ರ ಭಾನುವಾರ ಬೆಳಿಗ್ಗೆ 11ರವರೆಗೆ ಇಡಲಾಗುವುದು. ನಂತರ ಬೆಳಿಗ್ಗೆ 11.30 ಗಂಟೆಗೆ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು.
November 25, 2024