ಫುಟ್ ಪಾತ್ ವ್ಯಾಪಾರಕ್ಕೆ ಅವಕಾಶ ಕೊಡದಿದ್ದರೆ ಹೋರಾಟ : ರವಿ ಪಾಟೀಲ

ಫುಟ್ ಪಾತ್ ವ್ಯಾಪಾರಕ್ಕೆ ಅವಕಾಶ ಕೊಡದಿದ್ದರೆ ಹೋರಾಟ : ರವಿ ಪಾಟೀಲ - Janathavaniರಾಣೇಬೆನ್ನೂರು, ಡಿ.26 – ಫುಟ್ ಪಾತ್ ವ್ಯಾಪಾರಸ್ಥರ ಎತ್ತಂಗಡಿ ಅಮಾನವೀಯ ವಾದದ್ದು ಎಂದು ರಾಜ್ಯ ರೈತ ಸಂಘದ ಸಂಚಾಲಕ ರವೀಂದ್ರ ಗೌಡ ಪಾಟೀಲ ತೀವ್ರವಾಗಿ ಖಂಡಿಸಿದ್ದು, ಸೂಕ್ತ ಕ್ರಮ ಜರುಗಿಸ ದಿದ್ದಲ್ಲಿ ಬೀದಿ ಗಿಳಿಯುವ ಎಚ್ಚರಿಕೆ ನೀಡಿದ್ದಾರೆ. ಕೊರೊನಾ ಸೋಂಕು, ಲಾಕ್ ಡೌನ್ ಮುಂತಾದ ಒಂದು ವರ್ಷದ ನೋವಿನಿಂದ ಹೊರ ಬಂದು ಬದುಕಿಗೆ ನೆಲೆಕಂಡುಕೊಳ್ಳಲು ಪ್ರಯತ್ನ ನಡೆಸಿದ್ದ ಫುಟ್ ಪಾತ್ ನ ಬಡ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಿರುವುದು ತಾಲ್ಲೂಕು ಆಡಳಿತದ ರಾಕ್ಷಸಿ ಪ್ರವೃತ್ತಿ ಆಗಿದೆ. ಬಡವರ ಗೋಳಿಗೆ ಸ್ಪಂದಿಸದ ಬಿಜೆಪಿ ಸರ್ಕಾರ ಅವರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ ಎಂದು ಪಾಟೀಲ ಕಿಡಿಕಾರಿದ್ದಾರೆ. ಎಂ.ಜಿ. ರಸ್ತೆಯಲ್ಲಿನ ಮಳಿಗೆಗಳ ಹರಾಜು ಪ್ರಕ್ರಿಯೆ ಮುಗಿಯುವವರೆಗೆ ಈ ಬಡವರಿಗೆ ವ್ಯಾಪಾರ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಈ ಜನರ ಗೋಳು ತಪ್ಪಿಸುವಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ತಕ್ಷಣ ಆಗಮಿಸಿ ಬಡವರಿಗೆ ನ್ಯಾಯ ನೀಡದಿದ್ದರೆ ಹೋರಾಟಕ್ಕಿಳಿಯಲಾಗುವುದು ಎಂದು ರವಿ ಪಾಟೀಲ ತಿಳಿಸಿದ್ದಾರೆ.

error: Content is protected !!