ದಾವಣಗೆರೆ, ಡಿ.26- ಇಲ್ಲಿಗೆ ಸಮೀಪದ ಆವರಗೆರೆ ಗ್ರಾಮದ ಆರ್.ಜಿ.ಎಸ್. ನಗರದ ಶ್ರೀನಿವಾಸ ಮಂದಿರದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ನಿನ್ನೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಶ್ರೀ ವೆಂಕಟೇಶ್ವರ ಸ್ವಾಮಿಗೆ ಅಭಿಷೇಕ, ಅರ್ಚನೆ, ಮಹಾಮಂಗಳಾರತಿ ಮೊದಲಾದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜಾ ಕೈಂಕರ್ಯಗಳು ಶ್ರದ್ಧಾ – ಭಕ್ತಿಯಿಂದ ನೆರವೇರಿದವು.
ವಿವಿಧ ರೀತಿಯ ಹೂವುಗಳಿಂದ ಆಕರ್ಷಕವಾಗಿ ಅಲಂಕೃತಗೊಂಡಿದ್ದ ಶ್ರೀ ಸ್ವಾಮಿಯ ದರ್ಶನ ಪಡೆದ ಭಕ್ತರು ದಿವ್ಯ ಮೂರ್ತಿಯನ್ನು ಕಣ್ತುಂಬಿಕೊಂಡರು. ಸುಮಾರು 3 ಸಾವಿರಕ್ಕೂ ಅಧಿಕ ಭಕ್ತರು ದೇವಾಲಯಕ್ಕೆ ಆಗಮಿಸಿ, ದರ್ಶನ ಭಾಗ್ಯ ಪಡೆದಿದ್ದಾರೆ ಎಂದು ಆರ್.ಜಿ.ಎಸ್. ಗ್ರೂಪ್ ಆಫ್ ಫರ್ಮ್ ಛೇರ್ಮನ್ ಆರ್.ಜಿ. ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ.