ಹರಿಹರ ತಾಲ್ಲೂಕು ಜಿಗಳಿ ಗ್ರಾಮದ ವಾಸಿ ದಿ.ಪುಟ್ಟಣ್ಣರ ಕೊಕ್ಕಪ್ಪನವರ ಪುತ್ರರಾದ ಶ್ರೀ ಪುಟ್ಟಣ್ಣರ ಶೇಖರಪ್ಪ (58 ವರ್ಷ) ಮೃತರು ಜಿಗಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ, ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಧರ್ಮದರ್ಶಿಗಳಾಗಿ ಸೇವೆ ಸಲ್ಲಿಸಿದ್ದರು. ಅವರು ದಿನಾಂಕ 24.12.2020 ರ ಗುರುವಾರ ರಾತ್ರಿ 8.50 ಕ್ಕೆ ನಿಧನರಾದರು. ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಸಹೋದರರು, ಸಹೋದರಿಯರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 25.12.2020ರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಜಿಗಳಿ ಗ್ರಾಮದಲ್ಲಿ ನೆರವೇರಲಿದೆ.
January 1, 2025