ದಾವಣಗೆರೆ, ಡಿ.23- ಮಹಾ ರಾಷ್ಟ್ರದ ಅಮರಾ ವತಿಯ ಡಿವಿಷನಲ್ ಸ್ಪೋರ್ಟ್ಸ್ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ನಾಲ್ಕು ದಿನಗಳ 21ನೇ ಅಂತರರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ ಬೆಂಚ್ ಪ್ರೆಸ್ ಮತ್ತು ಡೆಡ್ ಲಿಫ್ಟ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಗರದ ಬೀರೇಶ್ವರ ವ್ಯಾಯಾಮ ಶಾಲೆಯ ಪವರ್ ಲಿಫ್ಟರ್ ಎ. ಚಂದ್ರಪ್ಪ ಅವರಿಗೆ ಎರಡು ಬಂಗಾರದ ಪದಕಗಳು ಲಭಿಸಿವೆ. 75 ಕೆ.ಜಿ. ವಿಭಾಗದಲ್ಲಿ ಡೆಡ್ ಲಿಫ್ಟ್ ಹಾಗೂ ಪವರ್ ಲಿಫ್ಟಿಂಗ್ ವಿಭಾಗದಲ್ಲಿ ಮಾಸ್ಟರ್-2 ಸ್ಪರ್ಧೆಯಲ್ಲಿ ಒಟ್ಟು 400 ಕೆ.ಜಿ. ಭಾರವನ್ನು ಎತ್ತುವುದರ ಮೂಲಕ ಪ್ರಥಮ ಸ್ಥಾನವನ್ನು ಪಡೆದು ಎರಡು ಬಂಗಾರದ ಪದಕಗಳಿಗೆ ಭಾಜನರಾಗಿದ್ದಾರೆ.
January 9, 2025