ದಾವಣಗೆರೆ,ಡಿ.23- ವಿಶ್ವವನ್ನೇ ತಲ್ಲಣಗೊಳಿ ಸಿದ ಕೊರೊನಾ ವೈರಸ್ ಸಂದರ್ಭದಲ್ಲೂ ನಗರದ ವಿಶ್ವಕರ್ಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಪ್ರಗತಿಯನ್ನು ಕಾಯ್ದುಕೊಂಡಿದೆ ಎಂದು ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಬಿ.ವಿ. ಶಿವಾನಂದ್ ಸಂತಸ ವ್ಯಕ್ತಪಡಿಸಿದ್ದಾರೆ.
ಸಂಘದ ಮುಖ್ಯ ಕಚೇರಿಯಲ್ಲಿ ಮೊನ್ನೆ ಏರ್ಪಾ ಡಾಗಿದ್ದ ವಿಶ್ವಕರ್ಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2019-20ನೇ ಸಾಲಿನ 23ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಸ್ಥೆಗೆ ಸ್ವಂತ ಕಟ್ಟಡವನ್ನು ಹೊಂದುವ ನಿಟ್ಟಿ ನಲ್ಲಿ ಪ್ರಸಕ್ತ ಅವಧಿಯಲ್ಲಿ ನಿವೇಶನ ಖರೀದಿಸಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಆಕಸ್ಮಿಕವಾಗಿ ಬಂ ದೊದಗಿದ ಕೊರೊನಾದಿಂದಾಗಿ ಸಂಘದ ಪ್ರಗತಿ ಯನ್ನು ಕಾಯ್ದುಕೊಳ್ಳುವುದು ಮುಖ್ಯ ಉದ್ದೇಶ ವಾಗಿತ್ತು. ಆ ನಿಟ್ಟಿನಲ್ಲಿ ಫಲಪ್ರದವಾಗಿದೆ. ಮುಂದಿನ ವಾರ್ಷಿಕ ಮಹಾಸಭೆಯ ವೇಳೆಗೆ ನಿವೇಶನ ಖರೀದಿಸಲಾಗುವುದು ಎಂದು ಅವರು ತಿಳಿಸಿದರು.
ಸಂಘದ ಪ್ರಗತಿ ಕುರಿತಂತೆ ಅಂಕಿ – ಅಂಶಗಳೊಂದಿಗೆ ಮಾತನಾಡಿದ ಶಿವಾನಂದ್, 2020, ಮಾರ್ಚ್ ಅಂತ್ಯಕ್ಕೆ 50 ಲಕ್ಷ ರೂ. ಷೇರು ಬಂಡವಾಳ ಹೊಂದಿದ್ದು, 5.40 ಕೋಟಿ ರೂ. ಠೇವಣಿ ಸಂಗ್ರಹಿಸಿದೆ. ಸದಸ್ಯರ ಅಗತ್ಯಗನುಗುಣವಾಗಿ 5 ಕೋಟಿ ರೂ. ಸಾಲ ಸೌಲಭ್ಯ ಒದಗಿಸಲಾಗಿದೆ. 6.56 ಕೋಟಿ ರೂ. ದುಡಿಯುವ ಬಂಡವಾಳ ಇದ್ದು, 9 ಲಕ್ಷ ರೂ. ಲಾಭ ಗಳಿಸಿದೆ ಎಂದು ಹೇಳಿದರು.
ಗ್ರಾಹಕರ – ಸದಸ್ಯರ ವಿಶ್ವಾಸ – ಸಹಕಾರ, ಹಿತೈಷಿಗಳ ಶುಭ ಹಾರೈಕೆ, ಸಿಬ್ಬಂದಿ ವರ್ಗದವರ ಕಾಯಕ ನಿಷ್ಠೆ ಮತ್ತು ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರ ಇಚ್ಛಾಶಕ್ತಿಯಿಂದಾಗಿ ಸಂಸ್ಥೆಯು ಪ್ರಗತಿ ಪಥದಲ್ಲಿ ಮುನ್ನಡೆದಿದೆ ಎಂದು ತಿಳಿಸಿದ ಅವರು, ಅಭಿವೃದ್ಧಿಗೆ ಕಾರಣರಾದ ಎಲ್ಲರನ್ನೂ ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.
ಸಂಘದ ಉಪಾಧ್ಯಕ್ಷ ಆರ್. ವಿಜಯಕುಮಾರ್ ಅವರು ಆಯ-ವ್ಯಯ ಕುರಿತಂತೆ ಮಾತನಾಡಿದರು. ನಿರ್ದೇಶಕರುಗಳಾದ ಇಂಜಿನಿಯರ್ ಎ.ಬಿ. ರವಿ, ಎನ್. ಪೂರ್ವಾಚಾರ್, ವಿ.ಎಂ. ಕೊಟ್ರೇಶಾಚಾರ್ ಅವರುಗಳು ವಾರ್ಷಿಕ ವರದಿ ವಾಚಿಸಿದರೆ, ಕಳೆದ ಸಾಲಿನ ವಾರ್ಷಿಕ ವರದಿಯನ್ನು ಸಂಘದ ಕಾರ್ಯದರ್ಶಿ ಸಿ.ಎನ್. ಬಡಿಗೇರ್ ಮಂಡಿಸಿದರು. ನಿರ್ದೇಶಕ ಎಸ್. ನಾಗರಾಜಾಚಾರ್ (ಮಾಯ ಕೊಂಡ) ಲಾಭ ವಿಲೇವಾರಿಯ ಮಾಹಿತಿ ನೀಡಿದರು.
ನಿರ್ದೇಶಕರುಗಳಾದ ಬಿ.ನಾಗೇಂದ್ರಾಚಾರ್ (ಬಸಾಪುರ), ಹೆಚ್.ಎನ್. ಜಯಾಚಾರ್ (ಹಿರೇಮೇಗಳಗೆರೆ), ಎಂ.ಪಿ.ನಾಗರಾಜ್ (ಶಾಮನೂರು), ಶ್ರೀಮತಿ ಆರ್. ರೇಖಾ ರಮೇಶ್, ಶ್ರೀಮತಿ ನೀಲಾವತಿ ಮಂಜುನಾಥಾಚಾರ್, ಶ್ರೀಮತಿ ಭಾಗ್ಯಮ್ಮ ಮಂಜುನಾಥ್ ಅವರುಗಳು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಹೆಚ್. ಲೀಲಾವತಿ, ಶ್ರೀಮತಿ ಆರ್. ಲಕ್ಷ್ಮಿ, ಕೆ.ವಿ. ಶೋಭಾ, ಎನ್.ಪಿ. ನಾಗವೇಣಿ ಅವರುಗಳ ಪ್ರಾರ್ಥನೆಯ ನಂತರ ಶಾಖಾ ವ್ಯವಸ್ಥಾ ಪಕ ಬಿ.ಎನ್. ಭೀಷ್ಮಾಚಾರ್ ಸ್ವಾಗತಿಸಿದರು. ನಿರ್ದೇಶಕ ಬಿ.ಸಿದ್ದಾಚಾರ್ ವಂದಿಸಿದರು.
ಸಿಬ್ಬಂದಿಗಳಾದ ಎನ್. ಮುರುಳೀಧರ, ಎ.ಮಂಜುನಾಥ್ ಮತ್ತಿತರರು ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಿದರು.