ಹೊನ್ನಾಳಿ, ಡಿ.23- ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ತಾಲ್ಲೂಕಿನ ಸುರಹೊನ್ನೆಯಲ್ಲಿ 42 ಲಕ್ಷ ರೂ. ವೆಚ್ಚದ ಶಾಖಾ ಕಟ್ಟಡ ಹೊಂದಿದ್ದು, ಸುಮಾರು 14 ಲಕ್ಷ ರೂ. ವೆಚ್ಚದಲ್ಲಿ ಸಾಸ್ವೆಹಳ್ಳಿ ಶಾಖೆಗೆ ನಿವೇಶನ ಖರೀದಿಸಲಾಗಿದೆ. 5,245 ಸದಸ್ಯರೊಂದಿಗೆ 37 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ ಎಂದು ಸೂಸೈಟಿ ಅಧ್ಯಕ್ಷ ಕೂಲಂಬಿ ಕೆ.ಎಂ. ಬಸವಲಿಂಗಪ್ಪ ತಿಳಿಸಿದ್ದಾರೆ.
ತಾಲ್ಲೂಕಿನ ಗೊಲ್ಲರಹಳ್ಳಿ ಗ್ರಾಮದ ತರಳಬಾಳು ಸಮುದಾಯ ಭವನದಲ್ಲಿ ಇಂದು ಆಯೋಜಿಸಲಾಗಿದ್ದ ಸೊಸೈಟಿಯ 20ನೇ ವರ್ಷದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸೊಸೈಟಿಯ 3 ಶಾಖೆಗಳು ಲಾಭದಾಯಕವಾಗಿ ವಹಿವಾಟು ನಡೆಸುತ್ತಿವೆ. ವಾರ್ಷಿಕ 156.83 ಕೋಟಿ ರೂ. ವಹಿವಾಟು ನಡೆಸಿ 3.83 ಕೋಟಿ ಆದಾಯದೊಂದಿಗೆ ಒಟ್ಟು 44.14 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಪ್ರಸ್ತಕ ಸಾಲಿಗೆ ಶೇ. 10ರಷ್ಟು ಡಿವಿಡೆಂಡನ್ನು ಸೊಸೈಟಿಯ ಸದಸ್ಯರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಸೊಸೈಟಿಯ ಕಾರ್ಯದರ್ಶಿ ಎಚ್.ಎನ್.ರುದ್ರೇಶ್ ಮಾತನಾಡಿ, ಮರಣ ಹೊಂದಿದ 44 ಸದಸ್ಯರ ಹಾಗೂ ಮೃತರಾದ 24 ಸಾಲಗಾರರ ಕುಟುಂಬಕ್ಕೆ ಸಾಲಗಾರರ ಕ್ಷೇಮನಿಧಿಯಿಂದ ನೆರವು ನೀಡಲಾಗಿದೆ.
ಉಪಾಧ್ಯಕ್ಷರಾದ ದೊಡ್ಡೇರಿ ಶಕುಂತಲ, ನಿರ್ದೇಶಕರುಗಳಾದ ಕುಂದೂರು ನಾಗರಾಜಪ್ಪ, ಮಲ್ಲಿಗೇನಹಳ್ಳಿ ಎಂ.ಜಿ. ಬಸವರಾಜಪ್ಪ, ಬಿದರಗಡ್ಡೆ ನಾಗೇಂದ್ರಪ್ಪ, ಸುರಹೊನ್ನೆ ಸಿದ್ದೇಶ್ವರಪ್ಪ, ಕ್ಯಾಸಿನಕೆರೆ ಶಂಕರಗೌಡ, ನ್ಯಾಮತಿ ಶ್ರೀಕಾಂತ್, ಹೊನ್ನಾಳಿ ಶೈಲೇಶ್, ಕಮ್ಮಾರಗಟ್ಟೆ ಶಿವಕುಮಾರ್, ಚಟ್ನಹಳ್ಳಿ ವಿಕಾಸ್, ತರಗನಹಳ್ಳಿ ಮಂಜುಳಾ, ವಿಜಯಪುರದ ಕೃಷ್ಣನಾಯ್ಕ, ಕಾರ್ಯದರ್ಶಿ ಎಚ್.ಎನ್. ರುದ್ರೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.