ಮಲೇಬೆನ್ನೂರು, ಡಿ.21- ಪ್ರಯಾಣಿಕರಿದ್ದ ಆಟೋ ಮತ್ತು ಕಾರು ನಡುವಿನ ಡಿಕ್ಕಿಯಲ್ಲಿ ಆಟೋದಲ್ಲಿದ್ದ ಪ್ರಯಾಣಿಕರಿಬ್ಬರು ಸಾವಿಗೀಡಾಗಿದ್ದು, ಐವರಿಗೆ ತೀವ್ರವಾಗಿ ಪೆಟ್ಟಾಗಿರುವ ಘಟನೆ ಸೋಮವಾರ ಬೆಳಿಗ್ಗೆ ಬ್ಯಾಲದಹಳ್ಳಿ ಬಳಿ ನಡೆದಿದೆ. ಉಕ್ಕಡಗಾತ್ರಿಯ ಗದಿಗೆಪ್ಪ (50) ಎಂಬಾತ ಸ್ಥಳದಲ್ಲಿಯೇ ಮೃತಪಟ್ಟರೆ, ಮಲೇಬೆನ್ನೂರು ವಾಸಿ ಜಿಗಳಿಯ ಚನ್ನಬಸಮ್ಮ (60) ಆಸ್ಪ ತ್ರೆಗೆ ಹೋಗುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
January 11, 2025