ಹರಪನಹಳ್ಳಿ, ಡಿ.19- ಎ.ಪಿ.ಎಂ.ಸಿ. ವರ್ತಕರ ಸಂಘದ ವತಿಯಿಂದ ನಾಡಿದ್ದು ದಿನಾಂಕ 21 ರ ಸೋಮವಾರ ಮಾರುಕಟ್ಟೆ ವ್ಯಾಪಾರ ವಹಿವಾಟು ಸ್ಥಗಿತಗೊಳಿಸುವ ಮೂಲಕ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ಸಂಘದಿಂದ ಹರಪನಹಳ್ಳಿ ಎಪಿಎಂಸಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆ ಶುಲ್ಕವನ್ನು ದಿಢೀರ್ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುವುದಾಗಿ ವರ್ತಕರ ಸಂಘದ ಅಧ್ಯಕ್ಷ ಸೋಮೋಜಿಲಾಲ್ ಜೈನ್ ತಿಳಿಸಿದ್ದಾರೆ. ಲಾಕ್ಡೌನ್ ಆದಾಗಿನಿಂದ ವ್ಯಾಪಾರ ವಹಿವಾಟು ಸ್ಥಗಿತವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಇಂತಹ ಸಮಯದಲ್ಲಿ ಸರ್ಕಾರ ದಿಢೀರ್ ಮಾರುಕಟ್ಟೆ ಶುಲ್ಕ ಹೆಚ್ಚಳ ಮಾಡಿದರೆ ವ್ಯವಹಾರದಲ್ಲಿ ತುಂಬಾ ನಷ್ಟವುಂಟಾಗಲಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಸರಿಪಡಿಸಲು ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.
ಮನವಿ ಸಲ್ಲಿಸುವ ವೇಳೆ ಸೋಮೋಜಿಲಾಲ್ ಜೈನ್, ಎಲ್.ಎನ್.ಕೊಟ್ರೇಶ್. ಎಂ. ಸಿದ್ದಣ್ಣ, ಟಿ. ಪ್ರಕಾಶ್ ಹಾಗು ಇನ್ನಿತರೆ ವರ್ತಕರು ಭಾಗವಹಿಸಿದ್ದರು.