ದಾವಣಗೆರೆ, ಡಿ. 19- ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರ ಪ್ರಥಮ ವರ್ಷದ ಪುಣ್ಯಾರಾಧನೆಯನ್ನು ನಗರದ ಶ್ರೀ ಕೃಷ್ಣ ವಿದ್ಯಾರ್ಥಿ ನಿಲಯದಲ್ಲಿ ಭಜನೆ ಮತ್ತು ಸ್ತೋತ್ರ ಪಠಣಾದಿಗಳಿಂದ ಇಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಗುರುರಾಜ್ ಕುಲಕರ್ಣಿ, ರಮೇಶ್, ಸುಮುಖ್, ರಾಘವೇಂದ್ರ, ಅಚ್ಯುತ್, ಶ್ರೀನಿಧಿ, ರಾಕೇಶ್, ವಿಕಾಸ್ ರೆಂಜಲ್, ಬಿ.ವೆಂಕಟೇಶ್, ಮಾಂತೇಶ್, ಬಿ. ಕಶ್ಯಪ್ ಇದ್ದರು.
January 10, 2025