ದಾವಣಗೆರೆ, ಡಿ.19- ನಗರ ಪಾಲಿಕೆಯ 19ನೇ ವಾರ್ಡಿನಲ್ಲಿ ಸಿಸಿ ರಸ್ತೆ ಹಾಗೂ ಯುಜಿಡಿ ಕಾಮಗಾರಿಗಳಿಗೆ ಇಂದು ಚಾಲನೆ ದೊರಕಿತು.
ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರೂ ಆದ ವಾರ್ಡಿನ ಪಾಲಿಕೆ ಸದಸ್ಯ ಆರ್.ಎಲ್. ಶಿವಪ್ರಕಾಶ್ ಅವರ ನೇತೃತ್ವದಲ್ಲಿ ಈ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಭೂಮಿ ಪೂಜೆ ನೆರವೇರಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.
ವಾರ್ಡಿನ ವಾಸಿಗಳಿಗೆ ಯಾವುದೇ ತೊಂದ ರೆಗಳು ಆಗದಂತೆ ಅವರುಗಳ ಹಿತದೃಷ್ಟಿಯಿಂದ ಮುತುವರ್ಜಿ ವಹಿಸಿ ಈ ಅಭಿವೃದ್ಧಿ ಕಾಮಗಾರಿ ಗಳನ್ನು ಕೈಗೊಳ್ಳಬೇಕು. ಗುಣಮಟ್ಟದ ಕಾಮ ಗಾರಿ ಜೊತೆಗೆ ನಿಗದಿತ ಅವಧಿಯಲ್ಲಿ ಕಾಮಗಾ ರಿಗಳನ್ನು ಪೂರ್ಣಗೊಳಿಸಲು ನಿಗಾ ವಹಿಸು ವಂತೆ ವಾರ್ಡಿನ ಸದಸ್ಯ ಶಿವಪ್ರಕಾಶ್ ಗೆ ಮಾರ್ಗ ದರ್ಶನ ನೀಡಿದರಲ್ಲದೇ, ಕಾಮಗಾರಿಗಳ ಜವಾ ಬ್ದಾರಿ ಹೊತ್ತ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ನಗರ ಪಾಲಿಕೆಯ 14ನೇ ಹಣ ಕಾಸು ಯೋಜನೆಯಡಿ ವಾರ್ಡಿನ ಶೇಖರಪ್ಪ ನಗರ ಮತ್ತು ಬಂಬೂಬಜಾರ್ ವ್ಯಾಪ್ತಿಯಲ್ಲಿ ಸಿಸಿ ರಸ್ತೆ ಹಾಗೂ ಯುಜಿಡಿ ಕಾಮಗಾರಿಗಳು ಸೇರಿ ಒಟ್ಟು 60 ಲಕ್ಷ ರೂ. ವೆಚ್ಚದ್ದಾಗಿದೆ.
ಈ ಸಂದರ್ಭದಲ್ಲಿ ಪಾಲಿಕೆ ಮೇಯರ್ ಬಿ.ಜಿ. ಅಜಯ್ ಕುಮಾರ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಮ್ಮ ಗೋಪಿನಾಯ್ಕ, ದೂಡಾ ಸದಸ್ಯೆ ದೇವೀರಮ್ಮ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ್ ಟಿ. ದಾಸಕರಿಯಪ್ಪ, ಆನಂದ್ ಸಿಂಧೆ, ದಕ್ಷಿಣ ಮಹಿಳಾ ಅಧ್ಯಕ್ಷರಾದ ಜಯಲಕ್ಷ್ಮಿಮತ್ತಿತರರು ಉಪಸ್ಥಿತರಿದ್ದರು.