ದಾವಣಗೆರೆ, ಡಿ.20- ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕೆ ನಿಧಿ ಸಂಗ್ರಹಿಸುವ ಅಭಿ ಯಾನದ ಪೂರ್ವಭಾವಿ ಸಭೆಯನ್ನು ವಿನೋಬನಗರದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯಕಾರಣಿ ಸದಸ್ಯ ಚೇತನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಕಾನೂನು ಪ್ರಕೋಷ್ಟದ ಹೆಚ್. ದಿವಾಕರ್, ಬೀಡಾ ನಾಗರಾಜ್, ಯುವ ಮೋರ್ಚಾ ಉಪಾಧ್ಯಕ್ಷ ಕಿರಣ್, ಮಂಜುನಾಥ್ ವಕೀಲರು, ಕಿಶೋರ್, ರವಿ, ರಾಜು, ಮಹಿಳಾ ಮೋರ್ಚಾ ಕಾರ್ಯದರ್ಶಿ ಪುಷ್ಪಾ ವಾಲಿ, ಸಂಘದ ರೂಪೇಶ್, ರವಿ, ಕಿರಣ ಹಾಗೂ ರಾಜು, ತಿಪ್ಪೇಶ್, ರಾಕೇಶ್, ಮಂಜು ಮತ್ತಿತರರಿದ್ದರು.