ಸಿಖ್ ಸಂತ ತೇಗ್ ಬಹದ್ದೂರ್ ಅವರಿಗೆ ನಮನ
ನವದೆಹಲಿ, ಡಿ. 20 – ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೆಹಲಿಯ ಪ್ರಸಿದ್ಧ ರಕಬ್ಗಂಜ್ ಗುರುದ್ವಾರಕ್ಕೆ ಭೇಟಿ ನೀಡಿದ್ದು, ಸಿಖ್ ಸಂತ ತೇಗ್ ಬಹದ್ದೂರ್ ಅವರಿಗೆ ನಮನ ಸಲ್ಲಿಸಿದ್ದಾರೆ. ನಿನ್ನೆ ಅವರ ಪುಣ್ಯತಿಥಿಯನ್ನು ಆಚರಿಸಲಾಗಿತ್ತು
ಪ್ರಧಾನಿ ಭೇಟಿಗಾಗಿ ಜನರನ್ನು ತಡೆಯಲು ಯಾವುದೇ ವಿಶೇಷ ವ್ಯವಸ್ಥೆ ಇಲ್ಲವೇ ಸಂಚಾರಿ ತಡೆಗಳನ್ನು ಆಯೋಜಿಸಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಭೇಟಿ ನಂತರ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ನಾನು ಬೆಳಿಗ್ಗೆ ಐತಿಹಾಸಿಕ ಗುರುದ್ವಾರ ರಕಬ್ ಗಂಜ್ ಸಾಹಿಬ್ಗೆ ಭೇಟಿ ನೀಡಿದ್ದೆ. ಅಲ್ಲಿ ಶ್ರೀ ಗುರು ತೇಗ್ ಬಹದ್ದೂರ್ ಜಿ ಅವರ ಪವಿತ್ರ ದೇಹದ ಸಮಾಧಿ ಮಾಡಲಾಗಿದೆ. ಶ್ರೀ ಗುರು ತೇಗ್ ಬಹದ್ದೂರ್ ಜಿ ಅವರ ಕರುಣೆಯಿಂದ ನಾನು ಅತೀವ ಸ್ಫೂರ್ತಿ ಪಡೆದಿದ್ದೇನೆ. ವಿಶ್ವದ ಲಕ್ಷಾಂತರ ಜನರಂತೆ ನಾನೂ ಧನ್ಯತಾ ಭಾವ ಹೊಂದಿದ್ದೇನೆ ಎಂದಿದ್ದಾರೆ.
ಗುರು ಸಾಹಿಬ್ಗಳ ವಿಶೇಷ ಕೃಪೆಯಿಂದಾಗಿಶ್ರೀ ಗುರು ತೇಗ್ ಬಹದ್ದೂರ್ ಜಿ ಅವರ 400ನೇ ಪ್ರಕಾಶ ಪರ್ವ ನಮ್ಮ ಸರ್ಕಾರದ ಆಡಳಿತಾವಧಿಯಲ್ಲಿ ಬಂದಿದೆ ಎಂದೂ ಪ್ರಧಾನಿ ಹೇಳಿದ್ದಾರೆ.
ಶ್ರೀ ಗುರು ತೇಗ್ ಬಹುದ್ದೂರ್ ಜಿ ಅವರ ವಿಚಾರಗಳನ್ನು ಈ ಸಂದರ್ಭದಲ್ಲಿ ಸಂಭ್ರಮಿಸೋಣ ಹಾಗೂ ಐತಿಹಾಸಿಕ ರೀತಿಯಲ್ಲಿ ಈಶೀರ್ವಾದ ಪಡೆಯೋಣ ಎಂದೂ ಪ್ರಧಾನಿ ಹೇಳಿದ್ದಾರೆ. ಪಂಜಾಬಿಯಲ್ಲೂ ನಮನ ಸಲ್ಲಿಸಿರುವ ಪ್ರಧಾನಿ ಮೋದಿ, ಭೇಟಿಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.