ಶಿಕ್ಷಕರ ಚುನಾವಣೆ : ಪ್ರಗತಿಪರ ಶಿಕ್ಷಕರ ವೇದಿಕೆಯ ಎಲ್ಲಾ ಅಭ್ಯರ್ಥಿಗಳ ಗೆಲುವು

ಹರಪನಹಳ್ಳಿ, ಡಿ.16- ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಕಾರ್ಯಕಾರಿ ಸಮಿತಿ ಚುನಾವಣೆ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಆವರಣದಲ್ಲಿ ನಡೆ ದಿದ್ದು, ಪ್ರಗತಿಪರ ಶಿಕ್ಷಕರ ವೇದಿಕೆಯಿಂದ ಸ್ಪರ್ಧಿ ಸಿದ್ದ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. 

ಒಟ್ಟು 25 ಸ್ಥಾನಗಳಲ್ಲಿ 17 ಸಾಮಾನ್ಯ ಹಾಗೂ 8 ಮಹಿಳಾ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇದರಲ್ಲಿ ಪ್ರಗತಿಪರ ಶಿಕ್ಷಕರ ವೇದಿಕೆಯಿಂದ ಎಲ್ಲಾ 25 ಸ್ಥಾನಗಳಿಗೂ ಸ್ಪರ್ಧಿಸಿದ್ದರೆ, ಕ್ರಿಯಾ ಶೀಲ ಒಕ್ಕೂಟದಿಂದ ಒಬ್ಬ ಮಹಿಳೆ ಹಾಗೂ 5 ಸಾಮಾನ್ಯ ಕ್ಷೇತ್ರಗಳಿಗೆ ಸೇರಿ ಕೇವಲ 6 ಸ್ಥಾನಗಳಿಗೆ ಮಾತ್ರ ಸ್ಪರ್ಧಿಸಲಾಗಿತ್ತು. ಮತದಾರರ ಪಟ್ಟಿಯಲ್ಲಿ ಒಟ್ಟು 1230 ಮತಗಳು ಇದ್ದು, ಅದರಲ್ಲಿ ವರ್ಗಾವಣೆ ಹಾಗೂ ಬಡ್ತಿಯಿಂದ ಹೋಗಿರುವ ಶಿಕ್ಷಕರನ್ನು ಹೊರತು ಪಡಿಸಿ ಉಳಿದ 1063 ಮತಗಳು ಅರ್ಹ ಮತಗಳಾಗಿದ್ದವು. ಅದರಲ್ಲಿ 873 ಮತಗಳು ಚಲಾವಣೆಗೊಂಡಿವೆ.

ಕಣದಲ್ಲಿದ್ದ ಪ್ರಗತಿಪರ ಶಿಕ್ಷಕರ ವೇದಿಕೆ ಹಾಗೂ ಕ್ರಿಯಾ ಶೀಲ ಶಿಕ್ಷಕರ ಒಕ್ಕೂಟದ ಅಭ್ಯರ್ಥಿಗಳ ಪೈಕಿ ಪ್ರಗತಿಪರ ಶಿಕ್ಷಕರ ವೇದಿಕೆಯ ಎಲ್ಲಾ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದರು. ಕ್ರಿಯಾ ಶೀಲ ಶಿಕ್ಷಕರ ಒಕ್ಕೂಟದ ಅಭ್ಯರ್ಥಿಗಳು ಪರಾಭವಗೊಂಡಿದ್ದರು.

ಬಿಸಿಯೂಟ ಸಹಾಯಕ ನಿರ್ದೇಶಕ ಎಲ್.ಆರ್. ಜಯರಾಜ್  ಚುನಾವಣಾ ಅಧಿಕಾರಿ ಯಾಗಿ, ಸಹಾಯಕ ಚುನಾವಣಾ ಅಧಿಕಾರಿಗಳಾಗಿ ಎನ್.ವಿ. ಹನುಮಂತರಾವ್, ಉದಯಶಂಕರ್, ಎಲ್.ಚಂದ್ರಶೇಖರ್‌ ಕಾರ್ಯ ನಿರ್ವಹಿಸಿದರು. 

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಕಾರ್ಯಕಾರಿ ಸಮಿತಿ ಚುನಾವಣೆ ಯಾವ ಪುರಸಭೆ, ಜಿ.ಪಂ.,  ತಾ.ಪಂ. ಚುನಾವಣೆ ಗಳಿಗಿಂತಲೂ ಕಡಿಮೆ ಇಲ್ಲ ಎನ್ನುವಂತಿತ್ತು.

error: Content is protected !!