ಮಲೇಬೆನ್ನೂರು, ಡಿ.15- ಇಲ್ಲಿನ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 18ನೇ ವಾರ್ಡ್‌ನ ಬಿಜೆಪಿ ಸದಸ್ಯ ಮಹಾಂತೇಶ್‌ಸ್ವಾಮಿ ಅವರು ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸ್ಥಾಯಿ ಸಮಿತಿ ಸದಸ್ಯರಾಗಿ ಮಾಸಣಗಿ ಶೇಖರಪ್ಪ, ಬರ್ಕತ್ ಅಲಿ, ಶ್ರೀಮತಿ ಸಮೀಮ್‌ಬಾನು, ಯೂಸೂಫ್, ಎ. ಆರೀಫ್‌ಅಲಿ, ದಾದಾವಲಿ, ಬಿ. ಸುರೇಶ್, ಶ್ರೀಮತಿ ಯಶೋಧ ಕೆ.ಜಿ. ಲೋಕೇಶ್, ಶ್ರೀಮತಿ ಶಶಿಕಲಾ ಕೇಶವಾಚಾರಿ, ಶ್ರೀಮತಿ ಸಾಕಮ್ಮ ರವಿಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.
ಸ್ಥಾಯಿ ಸಮಿತಿ ನೂತನ ಅಧ್ಯಕ್ಷರನ್ನು ಪುರಸಭೆ ಅಧ್ಯಕ್ಷೆ ಶ್ರೀಮತಿ ನಾಹೀದಾ ಅಂಜುಂ ಸೈಯದ್ ಇಸ್ರಾರ್, ಉಪಾಧ್ಯಕ್ಷೆ ಅಂಜಿನಮ್ಮ ವಿಜಯಕುಮಾರ್, ಮುಖ್ಯಾಧಿಕಾರಿ ಧರಣೇಂದ್ರಕುಮಾರ್, ಸದಸ್ಯರಾದ ಶ್ರೀಮತಿ ಪಾನಿಪೂರಿ ರಂಗನಾಥ್, ಸುಬ್ಬಿರಾಜಪ್ಪ ಹಾಗೂ ಪುರಸಭೆ ಅಧಿಕಾರಿಗಳು ಅಭಿನಂದಿಸಿದರು.