ಹರಿಹರ, ಡಿ. 15- ನಗರದ ಹೊರ ವಲಯದ ಅಮ ರಾವತಿ ಗ್ರಾಮದಲ್ಲಿ ಇಂದು ಸಂಜೆ ಮೂರು ಹುಲ್ಲಿನ ಬಣವೆಗಳಿಗೆ ಬೆಂಕಿ ಬಿದ್ದು ಲಕ್ಷಾಂತರ ರೂ.ಗಳಷ್ಟು ಹಾನಿಯಾಗಿದೆ.
ಅಗ್ನಿಶಾಮಕ ವಾಹನ ಆಗಮಿಸುವುದರೊಳಗೆ ಭತ್ತ, ರಾಗಿ, ಶೇಂಗಾ ಹೊಟ್ಟು ಸೇರಿದಂತೆ ಬಿಜಾಪುರ ಜೋಳದ ದಂಟಿನ ಬಣವೆಗಳು ಸಂಪೂರ್ಣವಾಗಿ ಸುಟ್ಟಿವೆ. ಬಣವೆಗಳು ರಾಜಶೇಖ ರಯ್ಯ, ನಾಗರಾಜ್, ಬಸವರಾಜಪ್ಪ ಅವರುಗಳಿಗೆ ಸೇರಿವೆ.
ಈ ಸಂದರ್ಭದಲ್ಲಿ ಹೆಚ್. ಬಿ. ನಾಗರಾಜ್, ಜಟ್ಟೆಪ್ಪ, ಎಪಿಎಂಸಿ ಸದಸ್ಯ ನಾಗರಾಜ್, ಹೆಚ್. ರಾಜು, ಸುರೇಶ್ ಹೆಚ್. ಕರಿಬಸಪ್ಪ, ಯೋಗೀಶ್, ಚಂದ್ರಪ್ಪ ಕುರುವತ್ತಿ, ಸಿದ್ದೇಶ್, ಡಿ. ಉಜ್ಜೇಶ್, ಪಿ.ಎನ್. ವಿರುಪಾಕ್ಷಪ್ಪ, ಅಗ್ನಿಶಾಮಕ ಠಾಣೆಯ ಪಿಎಸ್ಐ ಸಂಜೀವ್ ಕುಮಾರ್ ಮತ್ತಿತರರು ಹಾಜರಿದ್ದರು.