ಮೇಲ್ಮನೆಯಲ್ಲಿ ಕೀಳು ವರ್ತನೆ

ಸಭಾಪತಿ ಕುರ್ಚಿಗಾಗಿ ‘ಗೂಂಡಾಗಿರಿ’

ಬೆಂಗಳೂರು, ಡಿ. 15 – ಸಭಾಪತಿ ಕುರ್ಚಿಗಾಗಿ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ಸದಸ್ಯರು ಇಂದು ವಿಧಾನ ಪರಿಷತ್ತಿನಲ್ಲಿ ಗದ್ದಲ, ಗಲಾಟೆ, ಕೈ-ಕೈ ಮಿಲಾಯಿಸಿದ ಪ್ರಸಂಗ ಜರುಗಿತು. 

ವಿಧಾನ ಪರಿಷತ್ತಿನ ಇತಿಹಾಸ ದಲ್ಲೇ ಕುರ್ಚಿಗಾಗಿ ಮೂರು ರಾಜ ಕೀಯ ಪಕ್ಷಗಳ ಸದಸ್ಯರು ಕಾನೂ ನಿನ ಎಲ್ಲೆ ಮೀರಿ ಅಧಿಕಾರಕ್ಕಾಗಿ ನಡೆಸಿದ ಗಲಾಟೆ ಯಿಂದ ಪರಿಸ್ಥಿತಿ ಕೈ ಮೀರಿ ಹೋಯಿತು. 

ಬುದ್ಧಿವಂತರ ಮನೆ ಎಂಬ ಖ್ಯಾತಿ ಹೊಂದಿರುವ ಸದನದಲ್ಲಿ ಗಲಭೆ ಪರಿಸ್ಥಿತಿ ಯಿಂದಾಗಿ ಅಧಿಕಾರಿಗಳು ಮತ್ತು ಮಾರ್ಷಲ್‍ಗ ಳು ನಿಸ್ಸಹಾಯಕರಾಗಿ ಕೂರಬೇಕಾಯಿತು. 

ಸದನದಲ್ಲಿ ಬಹುಮತ ಇಲ್ಲದಿ ದ್ದರೂ ಸಭಾಪತಿ ಸ್ಥಾನಕ್ಕಾಗಿ ಕಾಂಗ್ರೆಸ್ ಗೂಂಡಾಗಿರಿಗೆ ಮುಂದಾದರೆ, ಇದರಿಂದ ತತ್ತರಿಸಿದ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಜೆಡಿಎಸ್ ಸದಸ್ಯರು ಸಮಸ್ಯೆ ಯನ್ನು ರಾಜ್ಯ ಪಾಲರ ಅಂಗಳಕ್ಕೆ ಕೊಂಡೊಯ್ದಿದ್ದಾರೆ.  ಸದನದ ಘಟನಾವಳಿಗಳ ನಂತರ ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾಂಗ್ರೆಸ್‌ನದ್ದು ಗೂಂಡಾಗಿರಿ ಎಂದರೆ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿಯದ್ದು ಗೂಂಡಾಗಿರಿ ಎಂದಿದ್ದಾರೆ. ಇಡೀ ಸದನದ ಸದಸ್ಯರ ವರ್ತನೆ §ಗೂಂಡಾಗಿರಿ’ ಮಟ್ಟಕ್ಕೆ ಹೋಗಿದ್ದು, ಕರ್ನಾಟಕದ ಸಂಸದೀಯ ಇತಿಹಾಸದಲ್ಲಿ ಕಳಂಕವಾಗಿದೆ. ಸಭಾಪತಿ ಪ್ರತಾಪಚಂದ್ರಶೆಟ್ಟಿ ಅವರ ವಿರುದ್ಧ ಬಿಜೆಪಿ ಕಳೆದ ಅಧಿವೇಶನ ಸಂದರ್ಭದಲ್ಲೇ ಅವಿಶ್ವಾಸ ಗೊತ್ತುವಳಿ ಮಂಡಿಸಿತ್ತು.  ಇದನ್ನು ಪ್ರಸ್ತಾಪಿಸದೆಯೇ ಸಭಾಪತಿ ಸದನ ಕಲಾಪವನ್ನು ಏಕಾಏಕಿ ಅನಿರ್ದಿಷ್ಟಾವಧಿಗೆ ಮುಂದೂಡಿದ್ದರು. 

ಈ ಸಂದರ್ಭದಲ್ಲಿ ಸರ್ಕಾರ ರಾಜ್ಯಪಾಲರ ಮೊರೆ ಹೋಗಿತ್ತು, ಈ ಹಿನ್ನೆಲೆಯಲ್ಲಿ ಅಧಿವೇಶನ ಕರೆಸಿ, ಸಭಾಪತಿ ವಿಷಯ ಸೇರಿದಂತೆ ಹಲವು ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳುವುದಿತ್ತು. 

ಸದನದ ನಿಯಮಾವಳಿ ಪ್ರಕಾರ ಸಭಾಧ್ಯಕ್ಷರು ಇಲ್ಲವೇ ಸಭಾಪತಿ ವಿರುದ್ಧ ಯಾವುದೇ ಅವಿಶ್ವಾಸ ಗೊತ್ತುವಳಿ ಪ್ರಸ್ತಾಪಿಸಿದಲ್ಲಿ ಅದನ್ನು ಗೌರವಿಸಿ ಆ ಸ್ಥಾನದಲ್ಲಿ ಉಪಸಭಾಪತಿ ಅವರನ್ನು ಕೂರಿಸಿ, ಮುಂದಿನ ಕಾರ್ಯಕಲಾಪಕ್ಕೆ ಅವಕಾಶ ಮಾಡಿಕೊಡಬೇಕು. 

ಅದರಂತೆ, ಇಂದು ಸದನ ಸೇರುತ್ತಿದ್ದಂತೆ, ಉಪಸಭಾಪತಿ ಧರ್ಮೇಗೌಡ ಪೀಠದಲ್ಲಿ ಕುಳಿತು ಕಲಾಪ ನಡೆಸಲು ಮುಂದಾಗುತ್ತಿದ್ದಂತೆ, ಕಾಂಗ್ರೆಸ್ ಸದಸ್ಯರು ಗದ್ದಲ, ಗೊಂದಲ ಎಬ್ಬಿಸಿದ್ದಲ್ಲದೆ, ಪೀಠದತ್ತ ಧಾವಿಸಿ ಬಲ ಪ್ರಯೋಗದಿಂದ ಉಪಸಭಾಪತಿಗಳನ್ನು ಪೀಠದಿಂದ ಹೊರಗೆ ತಳ್ಳಿದರು. 

ಕಾಂಗ್ರೆಸ್‍ನ ನಾರಾಯಣಸ್ವಾಮಿ, ನಜೀರ್ ಅಹಮದ್ ಹಾಗೂ ನಾರಾಯಣ ರಾವ್ ಮಾನೆ ಗೂಂಡಾ ಪ್ರವೃತ್ತಿ ಪ್ರದರ್ಶಿಸಿದರು. 

ಇವರುಗಳನ್ನು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಎಷ್ಟೇ ತಡೆದರೂ ಸಾಧ್ಯವಾಗಲಿಲ್ಲ, ಅಷ್ಟೇ ಅಲ್ಲದೆ, ಖಾಲಿ ಇದ್ದ ಕುರ್ಚಿಯಲ್ಲಿ ತಮ್ಮ ಪಕ್ಷದ ಚಂದ್ರಶೇಖರ್ ಪಾಟೀಲ್ ಅವರನ್ನು ಕೂರಿಸಿ, ಕಾವಲು ನಿಂತರು.

ಈ ಸಂದರ್ಭದಲ್ಲಿ ಬಿಜೆಪಿಯ ನಾರಾಯಣಸ್ವಾಮಿ, ಸಭಾಪತಿ ಸದನಕ್ಕೆ ಆಗಮಿಸುವ ಬಾಗಿಲನ್ನು ಬಂದ್ ಮಾಡಲು ಮುಂದಾದರು. 

ಇದರಿಂದ ಕೋಪೋದ್ರಿಕ್ತಗೊಂಡ ಕಾಂಗ್ರೆಸ್ ಸದಸ್ಯರು, ತಿರುಗಿಬಿದ್ದು, ಬಾಗಿಲನ್ನು ತೆರೆಯಲು ಮುಂದಾದರು. 

ಒಂದು ಹಂತದಲ್ಲಿ ನಾರಾಯಣ ರಾವ್ ಮಾನೆ ಬಾಗಿಲನ್ನು ತಮ್ಮ ಕಾಲಿನಿಂದ ಒದ್ದು, ಸದನವೇ ತಲೆತಗ್ಗಿಸುವಂತೆ ವರ್ತಿಸಿದರು. 

ಈ ಸಂದರ್ಭದಲ್ಲಿ ಸಚಿವರು ಮತ್ತು ಮಾರ್ಷಲ್‍ಗಳು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಹಬಂದಿಗೆ ತಂದರು. 

ಗಲಭೆ ನಡುವೆಯೇ ಪೀಠದ ಮುಂದೆ ಕೊರೊನಾ ಸೋಂಕು ತಡೆ ಸುರಕ್ಷತೆಗಾಗಿ ಅಳವಡಿಸಿದ್ದ ಗಾಜಿನ ಹಾಳೆಯನ್ನೂ ಕಿತ್ತೆಸೆದರು, ಇದರಿಂದ ಸದನದಲ್ಲಿ ಏನು ನಡೆಯುತ್ತಿದೆ ಎಂಬುದೇ ತಿಳಿಯದಾಯಿತು. ಒಬ್ಬರನ್ನೊಬ್ಬರು ಸದಸ್ಯರು ಎಳೆದಾಡುತ್ತಿದ್ದರು. 

ಸದನದಲ್ಲಿ ಈ ಗುದ್ದಾಟ ನಡೆಯುತ್ತಿರುವುದಕ್ಕೆ ಹಿರಿಯ ಸದಸ್ಯರು ತಲೆ ತಗ್ಗಿಸಿ ಸದನಕ್ಕೆ ಆಗುತ್ತಿರುವ ಅಪಮಾನವನ್ನು ಸಹಿಸಿ ಕುಳಿತಿದ್ದರು. ಇವರಾರೂ ಪರಿಸ್ಥಿತಿ ತಡೆಯಲು ಮುಂದಾಗಲಿಲ್ಲ.  

ಕಾಂಗ್ರೆಸ್‍ನವರ ಗೂಂಡಾವರ್ತನೆ ವಿರೋಧಿಸಿ ಬಿಜೆಪಿ ಸದಸ್ಯರು ಸದನದ ಮಧ್ಯೆ ಭಾಗಕ್ಕೆ ಆಗಮಿಸಿ ಧರಣೆಗೆ ಮುಂದಾದರು. 

ಇಷ್ಟಾದರೂ ಕಾಂಗ್ರೆಸ್‍ನವರು ಸಭಾಪತಿ ಪೀಠವನ್ನು ಸುತ್ತುವರಿದು ನಿಂತಿದ್ದರು.

ನಂತರ ಇದರ ನಡುವೆ ಕಾಂಗ್ರೆಸ್‍ನವರು ಇಂದು ತಡೆರಾತ್ರಿವರೆಗೂ ಸದನದ ಒಳಗೇ ಉಳಿಯಲು ನಿರ್ಧರಿಸಿದರು. 

ವಿರೋಧ ಪಕ್ಷ ಕಾಂಗ್ರೆಸ್ ನಡಾವಳಿ ಮತ್ತು ಸಭಾಪತಿ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ, ಮಧ್ಯೆ ಪ್ರವೇಶಿಸುವಂತೆ ಮನವಿ ಪತ್ರ ಸಿದ್ಧ ಪಡಿಸಿದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ರಾಜ್ಯಪಾಲರಿಗೆ ಸಲ್ಲಿಸಿದರು. 

ಅಧಿವೇಶನ ಆರಂಭಕ್ಕೂ ಮುನ್ನ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪರಿಷತ್‍ನಲ್ಲಿನ ಕಾಂಗ್ರೆಸ್ ಸದಸ್ಯರ ಸಭೆ ನಡೆಸಿ, ಬಿಜೆಪಿ ಮತ್ತು ಜೆಡಿಎಸ್ ಕೈಜೋಡಿಸಿ, ಸಭಾಪತಿ ಸ್ಥಾನ ಕಸಿಯಲು ಹವಣಿಸುತ್ತಿವೆ, ಯಾವುದೇ ಕಾರಣಕ್ಕೂ ಸಭಾಪತಿ ಸ್ಥಾನ ಬಿಟ್ಟುಕೊಡಬಾರದು ಎಂದು ತೀರ್ಮಾನಿಸಲಾಯಿತು. 

ಇತ್ತೀಚಿಗೆ ಸರ್ಕಾರ ಎಲ್ಲವನ್ನೂ ಬಲವಂತದಿಂದ ನಡೆಸಲು ಮುಂದಾಗಿದೆ, ಇದಕ್ಕೆ ಅವಕಾಶ ನೀಡಬಾರದು ಎಂದು ಸದಸ್ಯರಿಗೆ ಬಲ ತುಂಬಲಾಯಿತು. ಇದನ್ನೇ ಸದನದಲ್ಲೂ ಪ್ರದರ್ಶಿಸಲಾಯಿತು.

error: Content is protected !!