ಜಿಲ್ಲೆಯಲ್ಲಿ ಹೆಚ್ಚಿದ ಗ್ರಾಮ ಪಂಚಾಯ್ತಿ ಚುನಾವಣಾ ಕಾವು
ದಾವಣಗೆರೆ ತಾ.80 ಹೊನ್ನಾಳಿ ತಾ.31 ಸ್ಥಾನಗಳಿಗೆ ಅವಿರೋಧ ಆಯ್ಕೆ
ದಾವಣಗೆರೆ, ಡಿ. 15 – ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ ದಾವಣಗೆರೆ, ಹೊನ್ನಾಳಿ ಹಾಗೂ ಜಗಳೂರು ತಾಲ್ಲೂಕುಗಳ ಗ್ರಾಮ ಪಂಚಾಯ್ತಿಗಳಿಗೆ 211 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದಾವಣಗೆರೆಯ ಎರಡು ಹಾಗೂ ಹೊನ್ನಾಳಿಯ ಒಂದು ಸ್ಥಾನಗಳಿಗೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ಉಳಿದಂತೆ ಮೂರು ತಾಲ್ಲೂಕುಗಳ 1087 ಸ್ಥಾನಗಳಿಗೆ ಚುನಾವಣೆ ನಿಗದಿಯಂತೆ ನಡೆಯಲಿದೆ.
ಜಗಳೂರಿನಲ್ಲಿ ಅತಿ ಹೆಚ್ಚಿನ 100 ಸದಸ್ಯರು ಅವಿ ರೋಧವಾಗಿ ಆಯ್ಕೆ ಯಾಗಿದ್ದಾರೆ. ದಾವಣಗೆರೆ ತಾಲ್ಲೂಕಿನ 80 ಹಾಗೂ ಹೊನ್ನಾಳಿಯ 31 ಸದಸ್ಯರು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಅವಿರೋಧ ಸ್ಥಾನಗಳನ್ನು ಹೊರತು ಪಡಿಸಿ ದಾವಣಗೆರೆಯ 499, ಹೊನ್ನಾಳಿಯ 291 ಹಾಗೂ ಜಗ ಳೂರಿನ 297 ಸ್ಥಾನಗಳಿಗೆ ಈಗ ಚುನಾವಣೆ ನಡೆಯಬೇಕಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಾವಣಗೆರೆ ತಾಲ್ಲೂಕಿನಲ್ಲಿ ಒಟ್ಟು 38 ಗ್ರಾಮ ಪಂಚಾಯತಿಗಳಿದ್ದು, 581 ಸದಸ್ಯ ಸ್ಥಾನಗಳಿವೆ. 80 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, 499 ಸ್ಥಾನಗಳಿಗೆ ಚುನಾ ವಣೆ ನಡೆಯಲಿದೆ. 2 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಅನುಸೂಚಿತ ಜಾತಿ-413, ಅನುಸೂಚಿತ ಪಂಗಡ-179, ಹಿಂದುಳಿದ ವರ್ಗ (ಅ)-121, ಹಿಂದುಳಿದ ವರ್ಗ (ಬಿ)-21, , ಸಾಮಾನ್ಯ-663 ಅಭ್ಯರ್ಥಿಗಳು ಸೇರಿದಂತೆ ಒಟ್ಟು 1397 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಹೊನ್ನಾಳಿ ತಾಲ್ಲೂಕಿನಲ್ಲಿ ಒಟ್ಟು 28 ಗ್ರಾಮ ಪಂಚಾಯತಿಗಳಿದ್ದು, 323 ಸದಸ್ಯ ಸ್ಥಾನಗಳಿವೆ. 31 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, 291 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 1 ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಅನುಸೂಚಿತ ಜಾತಿ-242, ಅನುಸೂಚಿತ ಪಂಗಡ-81, ಹಿಂದುಳಿದ ವರ್ಗ (ಅ)-77, ಹಿಂದುಳಿದ ವರ್ಗ (ಬಿ)-15, , ಸಾಮಾನ್ಯ-395 ಅಭ್ಯರ್ಥಿಗಳು ಸೇರಿದಂತೆ ಒಟ್ಟು 810 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಜಗಳೂರು ತಾಲ್ಲೂಕು 100 ಸ್ಥಾನಗಳಿಗೆ ಅವಿರೋಧ ಆಯ್ಕೆ
ಬಿದರಕೆರೆ ಗ್ರಾ.ಪಂ. ಎಲ್ಲಾ 16 ಸ್ಥಾನಕ್ಕೂ ಅವಿರೋಧ ಆಯ್ಕೆ
ಜಗಳೂರು, ಡಿ.15- ತಾಲ್ಲೂಕಿನ 22 ಗ್ರಾಮ ಪಂಚಾಯತಿಗಳಿಗೆ ಇದೇ 22 ರಂದು ಚುನಾವಣೆ ನಡೆಯಲಿದ್ದು, ಒಟ್ಟು 397 ಸ್ಥಾನಗಳ ಪೈಕಿ 100 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿದೆ.
ನಾಮಪತ್ರ ವಾಪಸ್ ಪಡೆ ಯಲು ಕೊನೆಯ ದಿನವಾದ ಡಿ. 14ರಂದು ಒಟ್ಟು 482 ನಾಮಪತ್ರ ಗಳನ್ನು ವಾಪಸ್ ಪಡೆಯಲಾಗಿದೆ. ಉಳಿದಂತೆ 774 ಜನ ಅಂತಿಮ ವಾಗಿ ಕಣದಲ್ಲಿ ಉಳಿದಿದ್ದಾರೆ. ಪರಿಶಿಷ್ಟ ಜಾತಿಯ 134 ಮಹಿಳೆಯರು ಸೇರಿದಂತೆ 239 ಅಭ್ಯರ್ಥಿಗಳು, ಪರಿಶಿಷ್ಟ ಪಂಗಡದ 100 ಮಹಿಳೆಯರು ಸೇರಿದಂತೆ 188 ಅಭ್ಯರ್ಥಿಗಳು, ಬಿಸಿಎಂ §ಎ¬ 16 ಮಹಿಳೆಯರು ಸೇರಿದಂತೆ 16 ಹಾಗೂ ಸಾಮಾನ್ಯ ವರ್ಗದ 152 ಮಹಿಳೆಯರು ಸೇರಿ 331 ಆಕಾಂಕ್ಷಿಗಳು ಒಟ್ಟು 774 ಜನ ಅಂತಿಮವಾಗಿ ಕಣದಲ್ಲಿದ್ದಾರೆ.
ಅವಿರೋಧವಾಗಿ ಆಯ್ಕೆಯಾದ ಸ್ಥಾನಗಳು: ಬಸವನಕೋಟೆ ಗ್ರಾ.ಪಂ.-2, ಗುರುಸಿದ್ದಾಪುರ-3, ಸೊಕ್ಕೆ-1, ಕ್ಯಾಸೇನಹಳ್ಳಿ-9, ಅಣಬೂರು-5, ಹೊಸಕೆರೆ-5, ಕೆಚ್ಚೇನಹಳ್ಳಿ-9, ಹನುಮಂತಾಪುರ-14, ಹಿರೇಮಲ್ಲನಹೊಳೆ-3, ಪಲ್ಲಾಗಟ್ಟೆ-3, ಅಸಗೋಡು-11, ದೊಣೆಹಳ್ಳಿ-3, ದೇವಿಕೆರೆ-5, ಗುತ್ತಿದುರ್ಗ-1, ಬಿಸ್ತುವಳ್ಳಿ-3, ಮುಸ್ಟೂರು-2, ಕಲ್ಲೇದೇವರಪುರ-1, ತೋರಣಗಟ್ಟೆ-4, ಬಿದರಕೆರೆ-16 ಒಟ್ಟು 100 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಉಳಿದಂತೆ ದಿದ್ದಿಗೆ, ಬಿಳಿಚೋಡು ಮತ್ತು ಹಾಲೇಕಲ್ಲು ಗ್ರಾ.ಪಂ.ಗಳಲ್ಲಿ ಚುನಾವಣೆ ನಡೆಯಲಿದೆ.
27 ಸ್ಥಾನಗಳಿರುವ ತಾಲ್ಲೂಕಿನ ಅತಿದೊಡ್ಡ ಗ್ರಾಮ ಪಂಚಾಯ್ತಿ ಹನುಮಂತಾಪುರದಲ್ಲಿ ಒಟ್ಟು14 ಸ್ಥಾನಗಳಿಗೆ ಮತ್ತು ಅಸಗೋಡು ಗ್ರಾ.ಪಂ. 17 ಸ್ಥಾನಗಳಲ್ಲಿ 11 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.
ಬಿದರಕೆರೆ ಗ್ರಾ.ಪಂ. ನ ಎಲ್ಲಾ 16 ಸ್ಥಾನಗಳಿಗೂ ಅವಿರೋಧ ಆಯ್ಕೆ: ತಾಲ್ಲೂಕಿನ ಬಿದರಕೆರೆ ಗ್ರಾಮ ಪಂಚಾಯ್ತಿಯಲ್ಲಿ ಒಟ್ಟು 16 ಸ್ಥಾನಗಳಿದ್ದು, ಎಲ್ಲಾ ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆ ನಡೆದಿರುವುದು ವಿಶೇಷವಾಗಿದೆ.
ಈ ಮಾದರಿ ನಡೆ ಜಿಲ್ಲೆಯ ಗಮನ ಸೆಳೆದಿದ್ದು, ಇದೊಂದು ಉತ್ತಮ ಬೆಳವಣಿಗೆ ಎಂದು ಚುನಾವಣಾಧಿಕಾರಿ ವೆಂಕಟೇಶ್ ಮೂರ್ತಿ ತಿಳಿಸಿದ್ದಾರೆ.
ಮದ್ಯ ಮಾರಾಟ ನಿಷೇಧ
ದಾವಣಗೆರೆ, ಡಿ. 15- ಗ್ರಾಮ ಪಂಚಾಯ್ತಿ ಮೊದಲನೆ ಹಂತದ ಚುನಾವಣೆ ಹಿನ್ನೆಲೆಯಲ್ಲಿ ದಾವಣಗೆರೆ, ಹೊನ್ನಾಳಿ ಮತ್ತು ಜಗಳೂರು ತಾಲ್ಲೂಕುಗಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಡಿ. 20 ರಂದು ಸಂಜೆ 5 ಗಂಟೆಯಿಂದ ಡಿ. 22 ರಂದು ಸಂಜೆ 5 ಗಂಟೆಯವರೆಗೆ ಹಾಗೂ ಎರಡನೆ ಹಂತದಲ್ಲಿ ಚುನಾವಣೆ ನಡೆಯುವ ಹರಿಹರ, ಚನ್ನಗಿರಿ ಮತ್ತು ನ್ಯಾಮತಿ ತಾಲ್ಲೂಕುಗಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಡಿ. 25 ರಂದು ಸಂಜೆ 5 ಗಂಟೆಯಿಂದ ಡಿ. 27 ರಂದು ಸಂಜೆ 5 ಗಂಟೆ ವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶಿದ್ದಾರೆ.
ಸಿಬ್ಬಂದಿ ಕರೆದೊಯ್ಯಲು ಬಸ್
ದಾವಣಗೆರೆ, ಡಿ.15- ಗ್ರಾ.ಪಂ. ಚುನಾವಣೆ ಹಿನ್ನೆಲೆ ಯಲ್ಲಿ ಹೊನ್ನಾಳಿ ಮತ್ತು ಜಗಳೂರು ತಾಲ್ಲೂಕು ಗಳಿಗೆ ನೇಮಕ ಮಾಡಲಾದ ಪಿಆರ್ಓ ಮತ್ತು ಎಪಿಆರ್ಓ ಗಳಿಗೆ ಕ್ರಮವಾಗಿ ಡಿ.16 ಮತ್ತು 17 ರಂದು ತರಬೇತಿ ಏರ್ಪಡಿಸಲಾಗಿದೆ. ಈ ತರಬೇತಿಗೆ ಸಿಬ್ಬಂದಿಗಳನ್ನು ಕರೆದೊಯ್ಯಲು ಬಸ್ ವ್ಯವಸ್ಥೆ ಮಾಡಲಾಗಿದೆ. ಡಿ.16 ರಂದು ಹೊನ್ನಾಳಿ ತಾಲ್ಲೂಕಿಗೆ ಸಂಬಂಧಿಸಿದಂತೆ ಶ್ರೀ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಹಿರೇಕಲ್ಮಠ, ಹೊನ್ನಾಳಿ ಇಲ್ಲಿ ತರಬೇತಿ ನಡೆಯಲಿದ್ದು ಸಿಬ್ಬಂದಿಗಳನ್ನು ಕರೆದೊಯ್ಯಲು 2 ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ವಿಶ್ವನಾಥ. ರಾಜಸ್ವ ನಿರೀಕ್ಷಕರು ಲೋಕಿಕೆರೆ ಹೋಬಳಿ, ದಾವಣಗೆರೆ ಮೊ. 9964449525 ಇವರಿಗೆ ಹೊನ್ನಾಳಿ ತರಬೇತಿ ಸ್ಥಳಕ್ಕೆ ಸಿಬ್ಬಂದಿ ಕರೆದೊಯ್ಯುವ ಜವಾಬ್ದಾರಿ ವಹಿಸಲಾಗಿದೆ.
ಡಿ.16 ಮತ್ತು 17 ರಂದು ಜಗಳೂರು ತಾಲ್ಲೂಕಿಗೆ ಸಂಬಂಧಿಸಿದಂತೆ ಸರ್ಕಾರಿ ಪದವಿಪೂರ್ವ ಕಾಲೇಜು, ಜಗಳೂರು ಇಲ್ಲಿ ತರಬೇತಿ ಏರ್ಪಡಿಸಲಾಗಿದೆ. ಸಿಬ್ಬಂದಿಗಳನ್ನು ತರಬೇತಿಗೆ ಕರೆದೊಯ್ಯಲು ಕ್ರಮವಾಗಿ ಎರಡೂ ದಿನ ತಲಾ 2 ಬಸ್ಗಳ ವ್ಯವಸ್ಥೆ ಮಾಡಲಾಗಿದ್ದು, ಅಜ್ಜಪ್ಪ ಪತ್ರಿ, ರಾಜಸ್ವ ನಿರೀಕ್ಷಕರು ಮಾಯಕೊಂಡ ಹೋಬಳಿ, ದಾವಣಗೆರೆ, ಮೊ. 7019675227 ಇವರನ್ನು ತರಬೇತಿಗೆ ಸಿಬ್ಬಂದಿಗಳನ್ನು ಕರೆದೊಯ್ಯುವ ಜವಾಬ್ದಾರಿ ವಹಿಸಲಾಗಿದೆ. ಈ ದಿನಗಳಂದು ಬಸ್ ಹೈಸ್ಕೂಲ್ ಮೈದಾನದಿಂದ ಬೆಳಿಗ್ಗೆ 8 ಗಂಟೆಗೆ ಹೊರಡಲಿದೆ ಎಂದು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ತಿಳಿಸಿದ್ದಾರೆ.
ದಾವಣಗೆರೆ ತಾಲ್ಲೂಕಿನ ಕಂದಗಲ್ಲು ಗ್ರಾಮ ಪಂಚಾಯ್ತಿಯಲ್ಲಿ ಅತಿ ಹೆಚ್ಚಿನ 12 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಕೈದಾಳೆ ಗ್ರಾಮ ಪಂಚಾಯ್ತಿಯ 8, ಬೆಳವನೂರು ಹಾಗೂ ಮುದಹದಡಿಗಳ ತಲಾ 7, ಕುರ್ಕಿಯ 6, ಶ್ರೀರಾಮನಗರದ ಐದು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.
ಗೋಪನಾಳಿನ 4, ಶ್ಯಾಗಲೆ ಹಾಗೂ ನೇರ್ಲಿಗಿಯ ತಲಾ ಮೂರು, ಕಡ್ಲೆಬಾಳು ಹಾಗೂ ಕಂದನಕೋವಿಗಳ ತಲಾ 2 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ.
ಹೆಬ್ಬಾಳು, ಹೊನ್ನೂರು, ಅತ್ತಿಗೆರೆ, ನರಗನಹಳ್ಳಿ, ಅಣಬೇರು, ಮಳಲ್ಕೆರೆ, ಮತ್ತಿ, ಅಣಜಿ ಹಾಗೂ ಹದಡಿಗಳ ತಲಾ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ.
ಹೊನ್ನಾಳಿ ತಾಲ್ಲೂಕಿನ 31 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ತಾಲ್ಲೂಕಿನ ಉಳಿದ 291 ಸ್ಥಾನಗಳಿಗೆ ಈಗ ಚುನಾವಣೆ ನಡೆಯಬೇಕಿದೆ.
ಕುಳಗಟ್ಟೆ ಗ್ರಾಮ ಪಂಚಾಯ್ತಿಯ 9 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಹೆಚ್. ಗೋಪಗೊಂಡನಹಳ್ಳಿಯ 5, ಬನ್ನಿಕೋಡಿನ 4 ಹಾಗೂ ಅರಬಗಟ್ಟೆಯ ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆ ಮಾಡಲಾಗಿದೆ.
ಸಾಸ್ವೆಹಳ್ಳಿಯ ಎರಡು ಸ್ಥಾನಗಳಿಗೆ ಅವರೋಧ ಆಯ್ಕೆಯಾಗಿದೆ. ಹತ್ತೂರು, ಹರಳಹಳ್ಳಿ, ಹಿರೇಗೋಣಿಗೆರೆ, ಮಾಸಡಿ, ಕುಂಬಳೂರು, ಮುಕ್ತೇನಹಳ್ಳಿ, ರಾಂಪುರ, ಹೊಸಹಳ್ಳಿ ಹಾಗೂ ಹುಣಸಘಟ್ಟಗಳ ತಲಾ ಒಂದು ಕ್ಷೇತ್ರಕ್ಕೆ ಅವಿರೋಧ ಆಯ್ಕೆ ಮಾಡಲಾಗಿದೆ.