ಶಿಕ್ಷಕರ ಸಂಘದ ಚುನಾವಣೆಯಲ್ಲಿ ಬಿರುಸಿನ ಮತದಾನ

ಹರಿಹರ, ಡಿ.15- ನಗರದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಪ್ರಗತಿಪರ ವೇದಿಕೆ ಮತ್ತು ಸದ್ಭಾವನ ಶಿಕ್ಷಕರ ವೇದಿಕೆಯ ಮಧ್ಯೆ ಭಾರೀ ಪೈಪೋಟಿಯೊಂದಿಗೆ ಇಂದು ನಡೆಯಿತು.

ಸ್ಥಳೀಯ ಜಿಬಿಎಂಎಸ್ ಶಾಲಾ ಆವರಣ ದಲ್ಲಿ ಮತದಾನವು ಮೊದಲು ನಿಧಾನಗತಿಯಲ್ಲಿ ನಡೆದು ಮಧ್ಯಾಹ್ನ ಬಿಸಿಲು ಏರುತ್ತಿದ್ದಂತೆ ಮತಗಟ್ಟೆಗೆ ಶಿಕ್ಷಕರ ದಂಡು ಹರಿದುಬಂದಿತ್ತು. ಒಟ್ಟು 682 ಶಿಕ್ಷಕ ಮತದಾರರು ಇದ್ದು ಮಧ್ಯಾಹ್ನ ಒಂದು ಗಂಟೆಯ ಸಮಯಕ್ಕೆ ಶೇ. 60 ರಷ್ಟು ಶಿಕ್ಷಕರು ಮತ ಚಲಾಯಿಸಿದ್ದರು. ಮೂರು ಗಂಟೆಯ ಸಮಯಕ್ಕೆ ಶೇ . 75 ರಷ್ಟು ಮತದಾನ ನಡೆಯಿತು.

ಸದ್ಭಾವನ ಶಿಕ್ಷಕರ ವೇದಿಕೆ ತಂಡದ ಮುದ್ದೇರ ಹನುಮಂತಪ್ಪ ನೇತೃತ್ವದಲ್ಲಿ ಅಂಗಡಿ ಮಲ್ಲಿಕಾರ್ಜುನಪ್ಪ, ಎಂ.ಬಿ. ಅಶ್ಫಕ್ ಆಹ್ಮದ್, ಗದಿಗೆಪ್ಪ ವೈ. ಹಳೆಮನೆ, ಸಿ.ಕೆ. ಮಹೇಶ್, ಹೆಚ್.ಎಂ. ಮಹೇಶ್ವರಯ್ಯ, ಕೆ.ಬಿ. ಮಾರುತಿ, ಎಂ.ಹೆಚ್. ನಾಗರಾಜ್, ರಮೇಶ್ ರಡ್ಡಿ, ಶರಣ್ ಕುಮಾರ್ ಹೆಗಡೆ, ಮಹಿಳಾ ಮೀಸಲು ಸ್ಥಾನಕ್ಕೆ ಸಿ.ಎಸ್. ಗಿರಿಜಾಂಬ,  ಗುಲಾ ಬಾಜಾನ್, ಹೆಚ್.ಜಿ. ಈ. ವಿನೋದ ಇದ್ದಾರೆ.

ಪ್ರಗತಿಪರ ಶಿಕ್ಷಕರ ವೇದಿಕೆ ದೊಗ್ಗಳ್ಳಿ ಚಂದ್ರಪ್ಪನವರ ನೇತೃತ್ವದಲ್ಲಿ ಬಿ. ಚನ್ನಬಸಪ್ಪ,  ಕರಿಬಸಪ್ಪ ಕುಪ್ಪೇಲೂರು, ಮಂಜಪ್ಪ ಬಿದರಿ,ಜಿ. ಪರಶುರಾಮ್ , ಪೀರ್ಯಾನಾಯ್ಕ್, ರಾಜೇಂದ್ರಚಾರಿ, ಎನ್.ಹೆಚ್. ಸಿದ್ದಪ್ಪ ಸಂಗಣ್ಣನವರ್, ಸೈಯದ್ ನಜೀರ್ ಆಹ್ಮದ್, ಹೆಚ್. ತಿಪ್ಪೇಸ್ವಾಮಿ, ಮಹಿಳಾ ಮೀಸಲು ವತಿ ಯಿಂದ ಆರ್. ಗಂಗಮ್ಮ, ಆರ್.ಎಂ. ಮಮತಾ, ನಜ್ಮಾ ಬಾನು, ಸುಮಂಗಲ  ಅವರಿದ್ದು, ಗೆಲುವು ಯಾವ ತಂಡಕ್ಕೆ ಒಲಿಯುತ್ತದೆ ಎಂದು ಕಾದು ನೋಡಬೇಕಾಗಿದೆ.

ಈ ಸಂದರ್ಭದಲ್ಲಿ ಚುನಾವಣಾ ಉಸ್ತು ವಾರಿ ಆರ್.ಓ. ರೇವಣ್ಣನಾಯ್ಕ್, ಎ.ಆರ್.ಓ. ಈಶಪ್ಪ ಬೂದಿಹಾಳ್, ಬಸವರಾಜಯ್ಯ, ಆರ್.ಆರ್. ಮಠದ್, ಶಿಕ್ಷಕರಾದ ಶರಣ್ ಕುಮಾರ್ ಹೆಗಡೆ, ಮಲ್ಲಿಕಾರ್ಜುನ ಅಂಗಡಿ, ಮುದ್ದೇರ್ ಹನುಮಂತಪ್ಪ, ಗದಿಗೆಪ್ಪ ಹಳೇಮನಿ, ಮಂಜಪ್ಪ ಬಿದರಿ, ಜ್ಯೋತಿ, ಚಂದ್ರಪ್ಪ ದೊಗ್ಗಳ್ಳಿ ಇನ್ನಿತರರಿದ್ದರು.

error: Content is protected !!