ದಾವಣಗೆರೆ, ಡಿ.14- ಕಾರ್ತಿಕ ಸೋಮವಾರ ದಂದು ಜಿಲ್ಲಾ ವೀರಶೈವ ಮಹಾಸಭಾದ ಮಹಿಳಾ ಘಟಕದಿಂದ ನಗರದ ಶ್ರೀ ಗುರು ಬಕ್ಕೇಶ್ವರ ದೇವಸ್ಥಾನದಲ್ಲಿ ದೀಪ ಬೆಳಗಿಸುವುದರ ಮೂಲಕ ಕಾರ್ತಿಕೋತ್ಸವವನ್ನು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆದ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಉದ್ಘಾಟಿಸಿದರು. ಮಹಾಸಭಾದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಉಮಾ ರಮೇಶ್, ಶ್ರೀಮತಿ ಶೋಭಾ ಕೊಟ್ರೇಶ್, ಶ್ರೀಮತಿ ದಾಕ್ಷಾಯಿಣಿ ಅಂದನಪ್ಪ, ಶ್ರೀಮತಿ ನಿರ್ಮಲ ಕುರಡಿಮಠ, ಶ್ರೀಮತಿ ಲತಾ, ಶ್ರೀಮತಿ ಪುಷ್ಪ, ಶ್ರೀಮತಿ ರೂಪ ಗುರು, ಶ್ರೀಮತಿ ಮಂಜುಳಾ ಹಿರೇಮಠ, ಶ್ರೀಮತಿ ಕೆ.ಪಿ.ಜ್ಯೋತಿ, ಶ್ರೀಮತಿ ನೇತ್ರಾ ಉಪ್ಪಿನ್, ಶ್ರೀಮತಿ ನಾಗರತ್ನ ಮಠದ್, ಶ್ರೀಮತಿ ಮಂಗಳ ಕರಿಬಸಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
December 26, 2024