ದಾವಣಗೆರೆ, ಡಿ.14- ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಮೃತಪಟ್ಟಿದ್ದು, ನಾಲ್ವರು ಕೂಲಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡ ಘಟನೆ ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯ ಆನಗೋಡು-ಸಾಸಲು ರಸ್ತೆಯ ಓಬೇನಹಳ್ಳಿ ಕ್ರಾಸ್ ಹತ್ತಿರ ಇಂದು ನಡೆದಿದೆ.
ಗುಡ್ಡದ ರಂಗವ್ವನಹಳ್ಳಿ ಗ್ರಾಮದ ಉಮೇಶ ಬಾಬು (40) ಮೃತ ದುರ್ದೈವಿ. ಮಾರುತಿ, ಕಣುಮೇಶ, ಗಜೇಂದ್ರ, ಹೊಳಲ್ಕೆರೆ ತಾಲ್ಲೂಕಿನ ಹಿರೇಕಂದವಾಡಿ ಗ್ರಾಮದ ಮುತ್ತು ಗಾಯಗೊಂಡವರು. ಮೃತನು ಸೇರಿದಂತೆ ಐವರು ಟ್ರ್ಯಾಕ್ಟರ್ ನಲ್ಲಿ ಅಡಿಕೆ ತರಲು ಹಿರೇಕಂದವಾಡಿ ಗ್ರಾಮದಿಂದ ಅಣಜಿ ಗ್ರಾಮದ ತೋಟದಲ್ಲಿ ಅಡಿಕೆ ಕೆಡವಿಕೊಂಡು ಟ್ರ್ಯಾಕ್ಟರ್ ಟ್ರೇಲರ್ ಲೋಡ್ ಮಾಡಿಕೊಂಡು ವಾಪಸ್ಸಾಗುವಾಗ ಈ ಅಪಘಾತ ನಡೆದಿದೆ.