ದೆಹಲಿಯ ರೈತ ಚಳುವಳಿಗೆ ಬೆಂಬಲ
ದಾವಣಗೆರೆ, ಡಿ.14- ದೆಹಲಿಯಲ್ಲಿನ ರೈತ ಚಳುವಳಿಯ ಮುಂದುವರಿಕೆಯ ಭಾಗವಾಗಿ ಹಾಗೂ ರೈತ ಸಂಘಟನೆಗಳ ಒಕ್ಕೂಟದ ಕರೆಯ ಮೇರೆಗೆ ಆಲ್ ಇಂಡಿಯಾ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ/ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಎಲ್ಲಾ ಪ್ರಗತಿಪರ ರೈತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ತಾಲ್ಲೂಕಿನ ಹೆಬ್ಬಾಳದ ರಾಷ್ಟ್ರೀಯ ಹೆದ್ದಾರಿ-4ರ ಟೋಲ್ ಗೇಟ್ ಬಳಿ ಜಮಾ ಯಿಸಿದ್ದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರ 3 ಕರಾಳ ರೈತ ಕಾಯ್ದೆಗಳನ್ನು ಜಾರಿಗೊಳಿಸಿ ರುವುದಾಗಿ ಆರೋಪಿಸಿ ಅಸಮಾಧಾನ ವ್ಯಕ್ತಪಡಿಸಿದರಲ್ಲದೇ, ಈ ಕಾಯ್ದೆಗಳ ಹಿಂಪಡೆಗೆ ಆಗ್ರಹಿಸಿದರು. ಅಲ್ಲದೇ, ಹೆದ್ದಾರಿಯಲ್ಲಿರುವ ಟೋಲ್ ಸಂಗ್ರಹಣೆಯನ್ನು ವಿರೋಧಿಸಿದರು.
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರೈತರನ್ನು ಬಲಿ ಕೊಟ್ಟು ಮೂರು ಕರಾಳ ಕಾಯ್ದೆಗಳನ್ನು ಜಾರಿಗೆ ತಂದಿದೆ. ಈ ಕಾಯ್ದೆಗಳ ವಿರುದ್ಧ ದೇಶಾದ್ಯಂತ ರೈತರು ಒಕ್ಕೊ ರಲಿನಿಂದ ಪ್ರತಿಭಟಿಸುತ್ತಿದ್ದಾರೆ. ಕಾಯ್ದೆಗಳನ್ನು ಹಿಂತೆಗೆದು ಕೊಳ್ಳುವಂತೆ ಆಗ್ರಹಿಸಿ ಚಳುವಳಿ ಮಾಡುತ್ತಿದ್ದಾರೆ. ಆದರೆ ಸರ್ಕಾರ ಮೊಂಡಾಗಿ ತನ್ನ ನಿಲುವಿಗೆ ತಾನು ಅಂಟಿಕೊಂಡು ಕಾಯ್ದೆಗಳನ್ನು ಹಿಂತೆಗೆದುಕೊಳ್ಳವು ದಿಲ್ಲ ಎಂದು ಹಠ ಹಿಡಿದಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ (ಪುಟ್ಟಣ್ಣಯ್ಯ ಬಣ) ಮು ಖಂಡ ಬಲ್ಲೂರು ರವಿಕುಮಾರ್ ಆಕ್ಷೇಪಿಸಿದರು.
ಈ ತೀವ್ರ ಚಳಿಯಿಂದಾಗಿ ಈಗಾಗಲೇ ಸುಮಾರು 9 ರೈತ ನಾಯಕರು ಹುತಾತ್ಮರಾಗಿ ದ್ದಾರೆ. ಆದರೂ ಕೇಂದ್ರ ಸರ್ಕಾರ ಬಂಡವಾ ಳಶಾಹಿ ಪರವಾದ ರೈತರ, ಜನಸಾಮಾನ್ಯರ ವಿರೋಧಿಯಾದ ಈ 3 ಕಾಯ್ದೆಗಳನ್ನು ಹಿಂಪಡೆಯುವ ಬದಲು ಚಳುವಳಿಯ ನಾಯಕರಿಗೆ ಆಮಿಷವೊಡ್ಡಿ ಖರೀದಿ ಮಾಡಲು ಪ್ರಯತ್ನಿಸುತ್ತಿದೆ. ಹೋರಾಟದ ದಿಕ್ಕು ತಪ್ಪಿಸಲು ಎಲ್ಲಾ ಕುತಂತ್ರಗಳನ್ನು ಮಾಡುತ್ತಿದೆ. ಚಳುವಳಿಗೆ ಕಳಂಕ ಹಚ್ಚಲು ಪ್ರಯತ್ನಿಸುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ (ಕೋಡಿಹಳ್ಳಿ ಚಂದ್ರಶೇಖರ್ ಬಣ) ಮುಖಂಡ ಹೊನ್ನೂರು ಮುನಿಯಪ್ಪ ದೂರಿದರು.
ಪ್ರತಿಭಟನೆಯಲ್ಲಿ ರೈತ, ಕೃಷಿ ಕಾರ್ಮಿಕ ಸಂಘಟನೆಯ ರಾಜ್ಯಾಧ್ಯಕ್ಷ ಸುನೀತ್ ಕುಮಾರ್, ಜಿಲ್ಲಾ ಸಂಚಾಲಕ ತಿಪ್ಪೇಸ್ವಾಮಿ ಅಣಬೇರು, ಎಐಕೆಎಸ್ ಜಿಲ್ಲಾ ನಾಯಕ ರಂಗನಾಥ್, ಕರ್ನಾಟಕ ರಾಜ್ಯ ರೈತ ಸಂಘದ (ಪುಟ್ಟಣ್ಣಯ್ಯ ಬಣ) ತಾಲ್ಲೂಕು ಗೌರವಾಧ್ಯಕ್ಷ ನಿಂಗಪ್ಪ ಮಾಯಕೊಂಡ, ತಾಲ್ಲೂಕು ಸಂಚಾಲಕ ಪ್ರತಾಪ್ ಮಾಯಕೊಂಡ, ತಾಲ್ಲೂಕು ಅಧ್ಯಕ್ಷ ಮಾಯಕೊಂಡ ಅಶೋಕ್, ಪ್ರಸಾದ್ ಸೇರಿ ದಂತೆ ಹೆಬ್ಬಾಳ್ ಸಮೀಪದ ಹಳ್ಳಿಗಳಾದ ಹೊ ನ್ನೂರು, ಬುಳ್ಳಾಪುರ, ಚಿನ್ನಸಮುದ್ರ, ಮಲ್ಲಶೆಟ್ಟಿ ಹಳ್ಳಿ, ಹುಣಸೆಕಟ್ಟೆ, ಹೆಬ್ಬಾಳು, ನೀರ್ಥಡಿ, ಗುಮ್ಮ ನೂರು, ಆನಗೋಡು, ಮಾಯಕೊಂಡ ಹಾಗೂ ಇತರೆ ಹಳ್ಳಿಯ ರೈತರು ಪಾಲ್ಗೊಂಡಿದ್ದರು.