ಹರಿಹರ: 23 ಗ್ರಾಪಂಗಳಿಗೆ ಚುನಾವಣೆ

ಹರಿಹರ: 23 ಗ್ರಾಪಂಗಳಿಗೆ ಚುನಾವಣೆ - Janathavaniಹರಿಹರ, ಡಿ.12- ತಾಲ್ಲೂಕಿನಲ್ಲಿ ಒಟ್ಟು 24 ಗ್ರಾಮ ಪಂಚಾಯ್ತಿಗಳು ಇದ್ದು, ಇದರಲ್ಲಿ ಗುತ್ತೂರು ಗ್ರಾ.ಪಂ. ಅನ್ನು ಹರಿಹರ ನಗರಸಭೆಗೆ ಸೇರ್ಪಡೆಗೊಳಿಸಿರುವುದರಿಂದ 23 ಗ್ರಾಮ ಪಂಚಾಯ್ತಿ ಗಳಿಗೆ ಮಾತ್ರ ಚುನಾವಣೆ ನಡೆಯುತ್ತದೆ ಎಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ತಿಳಿಸಿದರು.

23 ಗ್ರಾ.ಪಂ. ಗಳಲ್ಲಿ 167 ಮತಗಟ್ಟೆಗಳಿದ್ದು, 134 ಕ್ಷೇತ್ರಗಳಲ್ಲಿ  351 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 2ನೇ ಹಂತದಲ್ಲಿ ಚುನಾವಣೆ ಪ್ರಕ್ರಿಯೆಯು ಡಿ. 11 ರಂದು ನಾಮಪತ್ರ ಸ್ವೀಕಾರಕ್ಕೆ ಅವಕಾಶ ಕಲ್ಪಿಸುವುದರ ಮೂಲಕ ಆರಂಭಗೊಂಡಿದ್ದು, ಡಿ. 16 ಕೊನೆಯ ದಿನವಾಗಿದೆ. ನಾಮಪತ್ರ ಪರಿಶೀಲನೆ, ಡಿ.17 ಹಾಗೂ ಡಿ.19 ವಾಪಸ್ ಪಡೆಯಲು ಕಡೆಯ ದಿನವಾಗಿದೆ. ಡಿ.30 ರಂದು ಚುನಾವಣೆ ನಡೆಯಲಿದೆ.

ತಾಲ್ಲೂಕಿನಲ್ಲಿ ಗ್ರಾ.ಪಂ. ಚುನಾವಣೆಯಲ್ಲಿ ಒಟ್ಟು 1,08,107 ಮತದಾರರು ಮತದಾನ ಮಾಡಲು ಅರ್ಹರಿದ್ದು, ಇದರಲ್ಲಿ ಪುರುಷರು-54,637, ಮಹಿಳೆಯರು-53,470 ಮತದಾರರಿದ್ದಾರೆ ಎಂದು ಅವರು ವಿವರಿಸಿದ್ದಾರೆ.

error: Content is protected !!