ಇಂಡಿಯನ್ ಸೌಹಾರ್ದ ಸಹಕಾರಿಗೆ 11 ಲಕ್ಷ ರೂ. ಲಾಭ

ಹರಿಹರ, ಡಿ.13- ನಗರದ ಇಂಡಿಯನ್ ಸೌಹಾರ್ದ ಸಹಕಾರಿ ನಿಯಮಿತವು 2019-2020 ನೇ ಸಾಲಿನಲ್ಲಿ 10,99,680 ರೂ. ನಿವ್ವಳ ಲಾಭ  ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸಿ.ಎನ್. ಹುಲಿಗೆಪ್ಪ ತಿಳಿಸಿದ್ದಾರೆ.

ಸಂಘದ ಸಭಾಂಗಣದಲ್ಲಿ ಇಂದು ಏರ್ಪಾಡಾಗಿದ್ದ ಸಂಸ್ಥೆಯ 2ನೇ ವರ್ಷದ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ನಮ್ಮ ಸಂಸ್ಥೆ ಪ್ರಾರಂಭಗೊಂಡು ಎರಡೇ ವರ್ಷಗಳಲ್ಲಿ ಸುಮಾರು 751 ಸದಸ್ಯರನ್ನು ಹೊಂದಿ ಉತ್ತಮ ಲಾಭಾಂಶ ಗಳಿಸುವತ್ತ ದಾಪುಗಾಲು ಹಾಕುತ್ತಿದೆ. ಗ್ರಾಹಕರ ಸೇವೆಯ ಸದುದ್ದೇಶದಿಂದ ವಿವಿಧ ಸೇವಾ ಸೌಲಭ್ಯಗಳನ್ನು ನೀಡುತ್ತಿದ್ದು, ಅದರಲ್ಲಿ ಪ್ರಮುಖವಾಗಿ ಸಣ್ಣ ವ್ಯಾಪಾರಿಗಳಿಗೆ ಸಾಲವನ್ನು ಒದಗಿಸಿ ಅವರ ಕುಟುಂಬವನ್ನು ಆರ್ಥಿಕ ಸ್ವಾವಲಂಬನೆಗೊಳಿಸಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಸಹಕಾರಿಯು ಮುಂದಿನ ದಿನಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಸದಸ್ಯರನ್ನು ಮಾಡುವುದು, ಠೇವಣಿ ಮೊತ್ತವನ್ನು ಹತ್ತು ಕೋಟಿಗೆ ಹೆಚ್ಚಿಸುವುದು, ಸ್ವಂತ ಕಟ್ಟಡವನ್ನು ಹೊಂದುವುದಕ್ಕೆ ಪೂರ್ವ ತಯಾರಿ ಮಾಡುವುದು, ಗ್ರಾಹಕರಿಗೆ ಎನ್‌ಇಎಫ್‌ಟಿ ಮೂಲಕ ಅವರ ಖಾತೆಗೆ ಹಣ ವರ್ಗಾವಣೆ ಮಾಡುವುದು ಸೇರಿದಂತೆ ಹಲವಾರು ಗುರಿಯನ್ನು ಹೊಂದಿದೆ ಎಂದು ಅವರು ವಿವರಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಂ.ಬಿ. ಪ್ರಭುದೇವ್, ನಿರ್ದೇಶಕರಾದ ಮನೋಹರ ಸಾ ಲದ್ವಾ, ಮಲ್ಲೇಶಪ್ಪ, ಕೆ.ಹೆಚ್. ಜೋಸೆಫ್ ದಿವಾಕರ್, ಮಾರುತಿ ಶೆಟ್ಟಿ, ರಿಯಾಜ್ ಅಹ್ಮದ್, ಸೈಯದ್ ಆಸೀಫ್ ಅಹ್ಮದ್, ಉಮಾಶಂಕರ್, ಜಗದೀಶ್ ಚೂರಿ, ಸುಕುಮಾರ್ ಹೆಚ್.ಎಂ, ರೇಖಾ ಯು. ಕಲಾಲ್, ಸುಜಾತ ಡ್ಯಾನಿಯಲ್,  ಮುಖ್ಯ ಕಾರ್ಯನಿರ್ವಾಹಕ ರವೀಂದ್ರನಾಥ ಆರ್.ಎಸ್ ಮತ್ತು ಸಿಬ್ಬಂದಿ ವರ್ಗದ ನಿಕಿತಾ ಕಲಾಲ್, ರಿರ್ಚಡ್, ಟೈಸನ್, ಪಿಗ್ಮಿ ಸಂಗ್ರಹಕಾರರಾದ ಚಂದ್ರಶೇಖರ್ ಎಸ್.ಎನ್‌., ಮಂಜುನಾಥ್ ಎ., ಹನುಮಂತಪ್ಪ ಟಿ.ಎಸ್., ಸಂದೀಪ್ ಎಸ್.ಎನ್., ಇಮ್ಯಾನುವೆಲ್ ಮಧುಕರ್, ಮಲ್ಲೇಶ್ ಆರ್., ಅನಿಲ್ ಪಿ.ಜೆ., ರವಿಕುಮಾರ್ ಎಸ್., ಸತೀಶ್ ಪಿ. ಇತರರು ಹಾಜರಿದ್ದರು.

ಮುಖ್ಯ ಕಾರ್ಯನಿರ್ವಾಹಕ ಆರ್.ಎಸ್. ರವೀಂದ್ರನಾಥ ಕಾರ್ಯಕ್ರಮ ನಿರೂಪಿಸಿದರು.

error: Content is protected !!