ದಾವಣಗೆರೆ ಡಿ.13 – ನಗರದ ವೆಜಿಟಬಲ್ ಪ್ಲಾಂಟ್ ಸೌಹಾರ್ದ ಕೋ-ಆಪರೇಟಿವ್ ಸಂಸ್ಥೆಯ 4ನೇ ವರ್ಷದ ಸರ್ವ ಸದಸ್ಯರ ಮಹಾಸಭೆ ಸಂಸ್ಥೆಯ ಆವರಣದಲ್ಲಿ ಇಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಹಕಾರಿಯ ಅಧ್ಯಕ್ಷ ಬಿ.ಸುರೇಶ್ ಹಾಲೇಕಲ್ ವಹಿಸಿದ್ದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಜೆ.ಕೆ ಶಿವಕುಮಾರ್, ನಿರ್ದೇಶಕರುಗಳಾದ ಕೆ.ಹೆಚ್.ಶಿವಯೋಗಪ್ಪ, ಆರ್.ಎನ್.ಮಾರುತಿ, ಎನ್.ರಾಜಣ್ಣ, ಹೆಚ್.ಬಿ.ಮಂಜುನಾಥ, ಎಸ್.ವಿ.ರುದ್ರಮುನಿ, ಸಿ.ಹನುಮಂತಪ್ಪ, ಟಿ.ಮಹಾಂ ತೇಶ್, ಎಂ.ಹೆಚ್.ರಾಜಪ್ಪ, ಮಲ್ಲಿಕಾರ್ಜುನ್ ಪಿ.ವಾಲಿ, ಶ್ರೀಮತಿ ಆಶಾ ಕೃಷ್ಣಮೂರ್ತಿ, ಶ್ರೀಮತಿ ಶ್ವೇತಾ ಹೆಚ್.ಟಿ., ಆಂತರಿಕ ಲೆಕ್ಕ ಪರಿಶೋಧಕ ಹೆಚ್.ತಿರುಕಪ್ಪ, ಪ್ರಧಾನ ವ್ಯವಸ್ಥಾಪಕ ಆರ್.ವೆಂಕಟಾಚಲಮೂರ್ತಿ, ಲೆಕ್ಕಪರಿಶೋಧಕ ಡಿ.ಇ. ಹರ್ಷ ಮತ್ತಿತರರು ಉಪಸ್ಥಿತರಿದ್ದರು.
January 11, 2025