ದಾವಣಗೆರೆ, ಡಿ.13- ನಗರದ ವರ್ತುಲ ರಸ್ತೆಯ ಶಾರದಾಂಬಾ ವೃತ್ತದಲ್ಲಿ ನೂತನವಾಗಿ ಪ್ರಾರಂಭವಾದ ಬಿಲ್ಡಿಂಗ್ ನೀಡ್ಸ್ ಶೋರೂಂನ ಪೇಂಟ್ ವಿಭಾಗವನ್ನು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಹಾರ್ಡ್ವೇರ್ ವಿಭಾಗವನ್ನು ಶಾಸಕ ಎಸ್.ಎ.ರವೀಂದ್ರನಾಥ್ ಅವರು ಉದ್ಘಾಟಿಸಿದರು.
ಮಹಾಪೌರ ಬಿ.ಜಿ.ಅಜಯ್ಕುಮಾರ್, ಉದ್ಯಮಿ ಎಸ್.ಎಸ್.ಗಣೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಎ.ಹೆಚ್. ಶಿವಯೋಗಿ ಸ್ವಾಮಿ, ನಗರ ಪಾಲಿಕೆ ಸದಸ್ಯರುಗಳಾದ ದೇವರಮನೆ ಶಿವಕುಮಾರ್, ಶ್ರೀಮತಿ ವೀಣಾ ನಂಜಣ್ಣ, ಎ.ನಾಗರಾಜ್, ಜೆ.ಎನ್.ಶ್ರೀನಿವಾಸ್, ಶಿವನಳ್ಳಿ ರಮೇಶ್, ಕೋಗುಂಡಿ ಬಕ್ಕೇಶಪ್ಪ, ದಿನೇಶ್ ಕೆ.ಶೆಟ್ಟಿ, ಸುರೇಶ್ ಗಂಡುಗಾಳೆ, ಜಯಪ್ರಕಾಶ್, ಕಂಚಿಕೆರೆ ಮಹೇಶ್, ಶ್ರೀನಿವಾಸ್ ಶಿವಗಂಗಾ, ಬೆಲ್ಲದ ಶಂಕರ್, ಅನಿಲ್ಗೌಡ ಮತ್ತಿತರರು ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಸಂಸ್ಥೆಯ ಶಂಭು ಉರೇಕೊಂಡಿ ಕುಟುಂಬದವರು ಮತ್ತು ಮಹದೇಶ್ವರ ಅವರುಗಳು ಅತಿಥಿ ಗಣ್ಯರನ್ನು ಸತ್ಕರಿಸಿ, ಬೀಳ್ಕೊಟ್ಟರು.