ದಾವಣಗೆರೆ, ಡಿ.10- ಇಲ್ಲಿನ ವಿದ್ಯಾನಗರದಲ್ಲಿ ಲೋಕಿಕೆರೆ ನಾಗರಾಜ್ ಅಭಿಮಾನಿ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವದ ಕನ್ನಡ ಹಬ್ಬ ಕಾರ್ಯಕ್ರಮವು ಇಂದು ಸಂಜೆ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಹೆಸರಾಂತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಮತ್ತು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ಮತ್ತು ಗಣ್ಯರು ನೆರವೇರಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ನಟರಾಜ್ ಎಂಟರ್ಟೈನ್ಮೆಂಟ್ ಸಂಸ್ಥೆಯು ಸಂಗೀತದ ರಸದೌತಣ ಉಣಬಡಿಸಿತು. ರಾಜೇಶ್ ಕೃಷ್ಣನ್ ಅತ್ಯದ್ಭುತವಾಗಿ ಗೀತೆಗಳನ್ನು ಹಾಡುವುದರ ಮೂಲಕ ಎಲ್ಲರ ಮನಸೂರೆ ಗೊಳಿಸಿದರು. ಇನ್ನೂ ಸರಿಗಮಪ ಜೂರಿ ಮೆಂಬರ್ಸ್‌ಗಳಾದ ಸಚಿನ್, ಹರ್ಷ ರಂಜಿನಿ, ಪುಷ್ಪ, ಸಂಗೀತ ತಸದೌತಣ ಉಣಬಡಿಸಿದರು. ಗಾಯಕರಾದ ಮೋಹನ್ ಮತ್ತು ರವಿರಾಜ್ ರಾಜೇಶ್ ಕೃಷ್ಣನ್ ಅವರಿಗೆ ಸಾಥ್ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ರೈತ ಮೋರ್ಚ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ಕೇವಲ ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡ ರಾಜ್ಯೋತ್ಸವ ಆಚರಣೆ ಅಲ್ಲ. ವರ್ಷದ 365 ದಿನಗಳಲ್ಲೂ ಕನ್ನಡ ಹಬ್ಬವನ್ನು ಆಚರಣೆ ಮಾಡಬೇಕು ಎಂದರು. ನಾನು ಕೊರೊನಾದಂತಹ ಸಂದರ್ಭದಲ್ಲಿ ಜನರಿಗೆ ಆಹಾರ ಕಿಟ್ ಮತ್ತು ಇನ್ನಿತರ ಸೇವೆಗಳನ್ನು ಮಾಡಿದ್ದೇನೆ. ಆದರೆ, ಕೆಲ ಜನರು ರಾಜಕೀಯಕ್ಕೋಸ್ಕರ ಈ ಸೇವೆ ಮಾಡುತ್ತಿದ್ದಾನೆ ಎಂದರು. ಆದರೆ, ನಾನು ಯಾವತ್ತೂ ರಾಜಕೀಯಕ್ಕೋಸ್ಕರ ಸೇವೆ ಮಾಡಿಲ್ಲ, ಜನರ ಸೇವೆಯೇ ದೇವರ ಸೇವೆ ಮಾಡಿದ್ದೇನೆ ಎಂದು ಹೇಳಿದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಕಾಡಜ್ಜಿ ಮಂಜುನಾಥ್ ಹಾಗೂ ಸಮಾಜ ಸೇವಕ ದಿಳ್ಳೆಪ್ಪ ಅವರುಗಳನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ದೂಡ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯರಾದ ಗೀತಾ ದಿಳ್ಳೆಪ್ಪ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ.ವೀರೇಶ್, ವೀಣಾ ನಂಜಪ್ಪ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ ಹಾಗೂ ಗಣ್ಯರು ಉಪಸ್ಥಿತರಿದ್ದರು.