ಕೂಡ್ಲಿಗಿ, ಡಿ.9 – ಕೇಂದ್ರ ಸರ್ಕಾರ ರೈತರ ಬದುಕನ್ನು ಬೀದಿಗೆ ತಳ್ಳುವ ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆಯಬೇಕು. ಈ ಮೂಲಕ ರೈತ ಪರಂಪರೆಯನ್ನು ದೇಶದಲ್ಲಿ ಉಳಿಸಬೇಕೆಂದು ರೈತ ಸಂಘಟನೆಯ ಮುಖಂಡರಾದ ದೇವರಮನಿ ಮಹೇಶ್ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ವಿರುದ್ದ ನಿನ್ನೆ ಕರೆ ನೀಡಿದ್ದ ಭಾರತ್ ಬಂದ್ ಸಂದರ್ಭದಲ್ಲಿ ಪಟ್ಟಣದ ಮದಕರಿನಾಯಕ ವೃತ್ತದಲ್ಲಿ ಮಾತನಾಡಿದರು.
ಕಾಂಗ್ರೆಸ್ ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ ಮಾತನಾಡಿದರು. ಕೂಡ್ಲಿಗಿ ರೈತ ಸಂಘ, ಹಸಿರು ಸೇನೆ, ಮಾದಿಗ ದಂಡೋರ, ದಲಿತ ಸಂಘರ್ಷ ಸಮಿತಿ ಸಾಗರ ಬಣ, ಬೀದಿಬದಿ ವ್ಯಾಪಾರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಗುನ್ನಳ್ಳಿ ರಾಘವೇಂದ್ರ, ಕಾಂಗ್ರೆಸ್ ಮಹಿಳಾ ಮುಖಂಡರಾದ ಜಿಂಕಲ್ ನಾಗಮಣಿ, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಮಂಜುನಾಥ ಮಯೂರ, ಡಿ.ಎಚ್.ದುರುಗೇಶ್, ನಲ್ಲಮುತ್ತು ದುರುಗೇಶ್, ಶುಕುರ್, ಕಕ್ಕುಪ್ಪಿ ಬಸವರಾಜ, ಹಿರೇಕುಂಬಳಗುಂಟೆ ಉಮೇಶ್, ಕಾಲ್ಚೆಟ್ಟಿ ಕೃಷ್ಣ ಗುಜ್ಜಲ್ಹರೀಶ್ ಅಜೇಯ್ರಾ ಮಾಶಾಲಿ ಮತ್ತಿತರರು ಹಾಜರಿದ್ದರು.