ಮಲೇಬೆನ್ನೂರಿನಲ್ಲಿ ಬಂದ್‌ ಬೆಂಬಲಿಸಿ ಪ್ರತಿಭಟನೆ

ಮಲೇಬೆನ್ನೂರು, ಡಿ.9- ಕೇಂದ್ರ ಸರ್ಕಾರದ ಜನ ವಿರೋಧಿ ಹಾಗೂ ರೈತ ವಿರೋಧಿ ನೀತಿಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ್‌ ಬಂದ್‌ ಬೆಂಬಲಿಸಿ ಮಲೇಬೆನ್ನೂರಿನಲ್ಲೂ ಪ್ರತಿಭಟನೆ ನಡೆಸಲಾಯಿತು.

ರೈತ ಸಂಘಗಳು ಮತ್ತು ಕಾಂಗ್ರೆಸ್‌ ಪಕ್ಷದವರು ಜಂಟಿಯಾಗಿ ಇಲ್ಲಿನ ನೀರಾವರಿ ಇಲಾಖೆಯಿಂದ ನಾಡ ಕಛೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಉಪತಹಶೀಲ್ದಾರ್‌ ಆರ್. ರವಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನಾಕಾರರು ಪ್ರತಿಭಟನಾ ಮೆರವಣಿಗೆ ಯನ್ನು ಮಾತ್ರ ನಡೆಸಿ, ಪಟ್ಟಣದಲ್ಲಿ ನಂತರ ಹರಿಹರಕ್ಕೆ ತೆರಳಿದರು. 

ಹಾಗಾಗಿ ಯಾವುದೇ ಅಂಗಡಿ, ಮುಂಗಟ್ಟುಗಳನ್ನು ಬಂದ್‌ ಮಾಡಿಸಲಿಲ್ಲ, ಎಂದಿನಂತೆ ವ್ಯಾಪಾರ-ವಹಿವಾಟು ನಡೆಯಿತು. ಆದರೂ ಜನ ಸಂಚಾರ ವಿರಳವಾಗಿತ್ತು.

ಹರಿಹರ ತಾ. ರೈತ ಸಂಘದ ಅಧ್ಯಕ್ಷ ಮಂಜುನಾಥ್‌ ಕೋಗಳಿ, ಗೌರವಾಧ್ಯಕ್ಷ ಬಿ. ಬಸಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಬಿ. ಅಬೀದ್‌ ಅಲಿ, ಎಪಿಎಂಸಿ ಸದಸ್ಯ ಮಂಜುನಾಥ್‌ ಪಟೇಲ್, ಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಪಿಎಸಿಎಸ್‌ ಮಾಜಿ ಅಧ್ಯಕ್ಷ ಕೆ.ಪಿ. ಗಂಗಾಧರ್‌, ರೈತ ಸಂಘದ ಗಡಗಿ ಆನಂದಪ್ಪ, ಕೊಕ್ಕನೂರು ಅಂಜಿನಪ್ಪ, ಕೆ.ಹೆಚ್‌. ಶಿವರಾಜ್, ತಿಪ್ಪೇಶ್‌ನಾಯ್ಕ, ಎಲ್‌. ರವಿನಾಯ್ಕ್, ಟಿ. ಫೈಜುಲ್ಲಾ, ಟಿ. ಶಿವಣ್ಣ, ಎಸ್‌. ಬಸವರಾಜ್, ಹನುಮಂತಪ್ಪ, ತಾ. ಕಿಸಾನ್‌ ಕಾಂಗ್ರೆಸ್‌ ಅಧ್ಯಕ್ಷ ಎಂ. ವಾಸುದೇವಮೂರ್ತಿ, ಕೊಟ್ರೇಶ್‌ನಾಯ್ಕ, ಪಿ. ಹಾಲೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!